ಉದಯವಾಹಿನಿ, ಬೆಂಗಳೂರು: ‘ಸಾಂಸ್ಕೃತಿಕ ಉತ್ಸವಗಳು ತಂತ್ರಜ್ಞಾನದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಸಂವರ್ಧನೆಗೆ ಹಾಗೂ ಸಬಲೀಕರಣಕ್ಕೆ ನೆರವಾಗುತ್ತವೆ ಎಂದು ನೋಕಿಯ ಮೊಬೈಲ್ ನೆಟ್ವರ್ಕ್ ನಿರ್ದೇಶಕಿ ಪೊನ್ನಿ ಕೃಷ್ಣಮೂರ್ತಿ ಹೇಳಿದರು.ನಗರದ ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವ ‘ಅನಾದ್ಯಂತ-೨೦೨೫’ ಅನ್ನು ಉದ್ಘಾಟಿಸಿ ಮಾತನಾಡಿ, ಅನ್ವೇಷಣೆಗಳು ಜಗತ್ತಿನ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತವೆ. ಈ ನಿಟ್ಟಿನಲ್ಲಿ ತಂತ್ರಜ್ಞರು ನೀಡುವ ಕೊಡುಗೆ ಅಪಾರ. ಒಳಗೊಳ್ಳುವಿಕೆಯ ಮನೋಧರ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲೂ ನೆರವಾಗುತ್ತದೆ ಎಂದರು.
ರಾಷ್ಟ್ರದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳನ್ನು ಪ್ರತಿನಿಧಿಸಿದ್ದ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಲದ ‘ಅನಾದ್ಯಂತ’ದ ಚರ್ಚೆಯ ವಿಷಯ ? ‘ರಿಧಮ್ ಆಫ್ ಭಾರತ’ ಅಂದರೆ ‘ಭಾರತದ ಪ್ರಗತಿಯ ಲಯ’ ಎಂಬ ಅಡಿಬಹರದೊಂದಿಗೆ ‘ಅನಾದ್ಯಂತ-೨೦೨೫’ ತಂತ್ರಜ್ಞಾನದ ಸದ್ಬಳಕೆಗೆ ಹಾಗೂ ವಿಕಸಿತ ಭಾರತ ಕುರಿತಂತೆ ಅನ್ವೇಷಣಾಧಾರಿತ ಸಂವಾದಗಳಿಗೆ ವೇದಿಕೆ ಕಲ್ಪಿಸಿತು.ಉತ್ಸವದಲ್ಲಿ ’ಕೋಡ್ ವಾರ್ಸ್’, ’ಸೋಲೋ ಡ್ಯಾನ್ಸ್’, ’ಮೋನೋ ಆ?ಯಕ್ಟಿಂಗ್, ’ಸ್ಟ್ರೀಟ್ ಪ್ಲೇ, ’ಕ್ವಿಜ್, ’ರೀಲ್ ಮೇಕಿಂಗ್, ’ಮೊಬೈಲ್ ಫೋಟೋಗ್ರಫಿ, ’ಬ್ಯಾಟಲ್ ಆಫ್ ಬ್ಯಾಂಡ್ಸ್’, ಚಿತ್ರಕಲೆ ಸ್ಪರ್ಧೆ, ’ಟ್ಯಾಟೂ ಮೇಕಿಂಗ್, ನೃತ್ಯ, ಚರ್ಚಾ ಸ್ಪರ್ಧೆ, ಕ್ರೀಡೆ, ’ಕೊರಿಯೋ ನೈಟ್, ಫ್ಯಾಶನ್ ಶೋ ಮೊದಲಾದ ಚಟುವಟಿಕೆಗಳೂ ನಡೆದವು.ದಕ್ಷಿಣ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿ ಹಾಗೂ ಶಾಸ್ತ್ರೀಯ ನೃತ್ಯ ಕಲಾವಿದೆ ಲಕ್ಷೀ ಗೋಪಾಲಸ್ವಾಮಿ ಅವರು ಮಾತನಾಡಿ, ಈ ನೈಜ ಜಗತ್ತಿನಲ್ಲಿ ಯಶಸ್ವಿಯಾಗಲು ಮಾನವೀಯ ಮೌಲ್ಯಗಳೊಂದಿಗೆ ಸಾಂಸ್ಕೃತಿಕ ಉತ್ಸವಗಳು ಅಗತ್ಯ. ಇವು ವಿದ್ಯಾರ್ಥಿಗಳು ತಮ್ಮ ಸ್ವಭಾವಗಳನ್ನು ಸಕಾರಾತ್ಮಕವಾಗಿ ಬೆಳೆಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು. ನಿಟ್ಟೆ ವಿವಿ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್ ಸ್ವಾಗತಿಸಿದರು.ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಆವರಣದ ಉಪಾಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ, ಶೈಕ್ಷಣಿಕ ಮುಖ್ಯಸ್ಥ ಡಾ.ಜೆ.ಸುಧೀರ್ ರೆಡ್ಡಿ, ಅನಾದ್ಯಂತ ಉತ್ಸವದ ಶಿಕ್ಷಕ ಸಂಯೋಜಕರಾದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥೆ ಡಾ.ಹಿತಾ.ಡಿ.ಶೆಟ್ಟಿ, ಮತ್ತು ಡಾ.ಎ.ಸಿ.ರಾಮಚಂದ್ರ, ಉತ್ಸವದ ತಾಂತ್ರಿಕ ವಿಭಾಗವಾದ ‘ಗೀಕ್‌ಮೇಹೆಮ್ನ ಶಿಕ್ಷಕ ಸಂಯೋಜಕ ಡಾ. ಪರಮೇಶಾಚಾರಿ ಬಿ.ಡಿ, ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು..

Leave a Reply

Your email address will not be published. Required fields are marked *

error: Content is protected !!