ಉದಯವಾಹಿನಿ,ಅಯೋಧ್ಯೆ : ಇಂದು ಶ್ರೀರಾಮ ನವಮಿ ಇಂದು ರಾಮನ ಅವತರಣದ ಮಹಾ ದಿನ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಒಂದು ಒಂದು ಅದ್ಭುತ ದೃಶ್ವನ್ನು ಕಂಡ ಭಕ್ತ ಸಾಗರ ಧನ್ಯತೆ ಭಾವದಲ್ಲಿ ಮಿಂದೆದ್ದರು.ಅದುವೇ ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ತಿಲಕದ ಅಲೌಕಿಕ ಕ್ಷಣ.ಸರಿಯಾಗಿ ಮಧ್ಯಾಹ್ನ ೧೨ ಗಂಟೆಗೆ, ಬಾಲರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಹೊಳೆದು ಸೂರ್ಯನು ತಿಲಕದಂತೆ ಕಂಗೊಳಿಸಿದೆ.
