ಉದಯವಾಹಿನಿ, ಥಾಣೆ: ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ವ್ಯಕ್ತಿಯೊಬ್ಬ ಆಕೆಯ ಕತ್ತು ಸೀಳಿ ಕೊಲೆ ಮಾಡಿ ಶವವನ್ನು ಬಾತ್ ರೂಮ್ ಕಿಟಕಿಯಿಂದ ಎಸೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.ಮುಂಬ್ರಾ ಪ್ರದೇಶದ ಸಾಮ್ರಾಟ್ ನಗರದ 10 ಅಂತಸ್ತಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಅಪರಾಧಕ್ಕಾಗಿ 20 ವರ್ಷದ ಆಸಿಫ್ ಆಕ್ಟರ್ ಮನ್ಸೂರಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥಾಣೆ ಮುನ್ಸಿ ಪಲ್ ಕಾರ್ಪೊರೇಷನ್ನ ವಿಪತ್ತು ನಿರ್ವಹಣಾ ಕೋಶಕ್ಕೆ ಈ ಘಟನೆ ವರದಿಯಾಗಿದೆ ಎಂದು ಅದರ ಮುಖ್ಯಸ್ಥ ಯಾಸಿನ್ ತಡ್ಡಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬಿಹಾರದ ಬಂಕಾ ಜಿಲ್ಲೆಯ ಸುಲ್ತಾನ್ಸುರ ಮೂಲದ ಆರೋಪಿ, ಹತ್ತಿರದ ಕಟ್ಟಡದಲ್ಲಿ ವಾಸಿಸುವ ಸಂತ್ರಸ್ತೆಗೆ ಆಟಿಕೆಗಳನ್ನು ನೀಡುವ ಮೂಲಕ ಅಮಿಷವೊಡ್ಡಿದ್ದ. ನಂತರ ಅವನು ಅವಳನ್ನು ಅರನೇ ಮಹಡಿಯಲ್ಲಿರುವ ತನ್ನ ಫ್ಲ್ಯಾಟ್‌ ಗೆ ಕರೆದೊಯ್ದನು. ಅಲ್ಲಿ ಅವನು ಅವಳ ಮೇಲೆ ಅತ್ಯಾಚಾರ ಎಸಗಿದನು ಮತ್ತು ನಂತರ ಹರಿತವಾದ ಆಯುಧದಿಂದ ಅವಳ ಕತ್ತು ಸೀಳಿದನು.

 

Leave a Reply

Your email address will not be published. Required fields are marked *

error: Content is protected !!