ಉದಯವಾಹಿನಿ, ಚಿಕ್ಕಬಳ್ಳಾಪುರ : ರಾಷ್ಟ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವುದು ಕೇಂದ್ರ ಸರ್ಕಾರ ಭಾರತೀಯ ಜನತಾ ಪಕ್ಷದವರು ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಷ ಯಾತ್ರೆ ಮಾಡಬೇಕೆ ಹೊರತು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುವುದಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ಅವರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌಡಗೆರೆ ಪಂಚಾಯತಿಯ ಹೊನ್ನಪ್ಪನಹಳ್ಳಿ ಚಿನ್ನ ನಾಗೇನಹಳ್ಳಿ ಹಾಗೂ ಬಂದಾರಲಹಳ್ಳಿ ಗ್ರಾಮಗಳಲ್ಲಿ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ನಿಮಿತ್ತ ಆಗಮಿಸಿ ಅಲ್ಲಿನ ಜನತೆಯ ಕುಂದುಕೊರತೆಗಳನ್ನು ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರತೀಯ ಜನತಾ ಪಕ್ಷದವರು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಗೆ ಜನರೇ ಬರುತ್ತಿಲ್ಲ ಇನ್ನು ಆಕ್ರೋಶ ಎಲ್ಲಿಂದ ಬರುತ್ತದೆ ಎಂದು ವ್ಯಂಗ್ಯ ಆಡಿದಾರಲ್ಲದೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯ ವಿರುದ್ಧ ಪ್ರಹ್ಲಾದ್ ಜೋಶಿ ವಿಜೇಂದ್ರ ಒಳಗೊಂಡಂತೆ ಬಿಜೆಪಿ ನಾಯಕರು ಏನು ಹೇಳುತ್ತಾರೆ ಎಂದು ಅವರನ್ನೇ ಪ್ರಶ್ನಿಸಿದರು.ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ತಾಲೂಕು ಆಡಳಿತದ ೩೬ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಚೇನಹಳ್ಳಿ ತಾಲೂಕು ವ್ಯಾಪ್ತಿಯ ಗೌಡಗೆರೆ ಸಂಚರಿಸಿ ಜನರ ಕಷ್ಟ ಸುಖ ವಿಚಾರಿಸಿ ಸ್ಥಳದಲ್ಲಿಯೇ ಮತದಾರರು ಹೇಳಿಕೊಂಡ ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ವಿವರಣೆ ಧರಿಸಿಕೊಂಡು ಸಾಧ್ಯವಾದಷ್ಟು ಪರಿಷ್ಕಾರ ಮಾಡಿಕೊಟ್ಟರು.
ಗೌಡಗೆರೆ ಪಂಚಾಯಿತಿ ಪಿ.ಡಿ.ಓ. ತನ್ನ ಕರ್ತವ್ಯದಲ್ಲಿ ನಿರ್ಲಕ್ಷ ವಹಿಸಿದ್ದಾನೆ ಹಾಗೂ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹ ಹಾಕಿಲ್ಲ ಎಂದು ಸಾರ್ವಜನಿಕರು ಆರಪಿಸಿದಾಗ ಅಧಿಕಾರಿಯ ವಿರುದ್ಧ ಕಿಡಿ ಕಾರ್ಯದ ಶಾಸಕ ಪ್ರದೀಪ್ ಈಶ್ವರ್ ನಿನ್ನ ನಡತೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಸಿದರು.
