ಉದಯವಾಹಿನಿ, ಕೋಲಾರ: ನಗರದಲ್ಲಿ ಶ್ರೀ ಬಸವ ಜಯಂತಿಯ ಅಂಗವಾಗಿ ಪೂರ್ವ ಭಾವಿ ಸಿದ್ದತೆಗಳಿಗಾಗಿ ವೀರಶೈವ ಸಮುದಾಯದ ಸಂಘಟನೆಗಾಗಿ ವಿವಿಧ ಸಮಿತಿ ಮುಖಂಡರುಗಳು ತಾಲ್ಲೂಕು ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ನಗರದ ಗೌರಿಪೇಟೆಯಲ್ಲಿನ ಶ್ರೀ ಬಯಲು ಬಸವೇಶ್ವರ ದೇವಾಲಯದಲ್ಲಿ ವಿವಿಧ ಸಮಿತಿಗಳ ಮುಖಂಡರುಗಳು ಬುಧವಾರ ಸಭೆ ನಡೆಸಿ ಏ.೩೦ರ ಶ್ರೀ ಬಸವ ಜಯಂತಿಯ ಅಂಗವಾಗಿ ವೀರಶೈವ ಸಮುದಾಯದವು ನಾಗಲಾಪುರ ಮಹಾಸಂಸ್ಥಾನ ಮಠದ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಮತ್ತು ಬೆಳ್ಳಾವಿ ಮಠದ ಶ್ರೀ ಮಹಂತ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸಂಘಟಿತರಾಗಿ ಆಚರಿಸಲು ನಿರ್ಧಾರಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಯೋಜಕತ್ವದಲ್ಲಿ ಏ,೩೦ರ ಬುಧವಾರದಂದು ನಗರದ ಶ್ರೀ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿರುವ ವೀರಶೈವ ಸಮುದಾಯದ ಪ್ರತಿ ಮನೆಗೆ ಕನಿಷ್ಠ ಓರ್ವರಂತೆ ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸ ಬೇಕೆಂದು ತೀರ್ಮಾನಿಸಿದರು.
ಏ,೧೨ ರಂದು ಶನಿವಾರ ತಾಲ್ಲೂಕಿನ ಗ್ರಾಮೀಣಾ ಪ್ರದೇಶಗಳಾದ ಬೀಚಗೊಂಡನಹಳ್ಳಿ. ಊರಟಿ ಆಗ್ರಹಾರ, ರಘುಪತಿಹೊಸಹಳ್ಳಿ, ಕುರಗಲ್, ಬೆಳಮಾರನಹಳ್ಳಿ, ಸಿಂಗೇಹಳ್ಳಿ ,ವೇಮಗಲ್. ಚೋಳಘಟ್ಟ, ಅಂದ್ರಹಳ್ಳಿ, ರಾಮಸಂದ್ರ, ನರಸಾಪುರ, ನಾಗಲಾಪುರ, ಕಳ್ಳಿಪುರ, ಜಂಗಮ ಬಸಾಪುರ, ಪಾರೇಹೊಸಹಳ್ಳಿ, ಜಂಗಮಗುರ್ಜೆನಹಳ್ಳಿ, ಬಣಕನಹಳ್ಳಿ, ಚಿಕ್ಕ ಆಯ್ಯೋರು ಗ್ರಾಮಗಳಿಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದರು,
ಏ,೧೩ ರ ಭಾನುವಾರದಂದು ವಕ್ಕಲೇರಿ, ಶಟ್ಟಿಕೊತ್ತನೂರು, ಶಟ್ಟಿಗಾನಹಳ್ಳಿ, ಹೊಗರಿಗೊಲ್ಲಹಳ್ಳಿ, ಮೈಲಾಂಡಹಳ್ಳಿ, ಬೆಳಗಾನಹಳ್ಳಿ, ಶೀಗೆಹಳ್ಳಿ, ಕಾಮಂಡಹಳ್ಳಿ, ನರಸಾಪುರ, ಉದ್ದಪನಹಳ್ಳಿ. ಚೊಕ್ಕಪುರ, ಆಲಹಳ್ಳಿ, , ಹಂಚಳ ಚೋಳಘಟ್ಟ, ಶೆಟ್ಟಿಮಾದಮಂಗಲ. ಶೆಟ್ಟಿವಾರಹಳ್ಳಿ ಹಾಗೂ ದೊಡ್ಡವಲ್ಲಬಿ ಗ್ರಾಮಗಳಿಗೆ ಭೇಟಿ ಸಮುದಾಯಗಳ ಮನೆಗಳಿಗೆ ಭೇಟಿ ನೀಡಿ ಬಸವ ಜಯಂತಿ ಕಾರ್ಯಕ್ರಮ ಆಹ್ವಾನಿಸಲು ತೀರ್ಮಾನಿಸಲಾಯಿತು.
