ಉದಯವಾಹಿನಿ, ಕೈರೊ: ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಸೇರಿ ಕನಿಷ್ಠ 38 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಬುಧವಾರ ತಿಳಿಸಿದರು. ಗಾಜಾ ನಗರದ ಜನವಸತಿ ಬಹುಮಹಡಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವರು ಭಗ್ನಾವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ದಾಳಿಯಿಂದ ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದರು. ಹಲವು ದಾಳಿಗಳ ಸಂಚುಕೋರ ಹಮಾಸ್ ಹಿರಿಯ ನಾಯಕನೊಬ್ಬ ಕಟ್ಟಡದಲ್ಲಿ ಅಡಗಿದ್ದ ಕಾರಣ ಈ ದಾಳಿ ನಡೆಸಲಾಯಿತು. ದಾಳಿಗೂ
ಮೊದಲು ಜನರ ಸ್ಥಳಾಂತರಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಇಸ್ರೇಲ್ ಸೇನೆ ಹೇಳಿದೆ.
