ಉದಯವಾಹಿನಿ,ಬೆಂಗಳೂರು: ವೋಟ್ ಹಾಕಿದ್ದೀವಿ, ಸೌಲಭ್ಯ ಕೊಡದಿದ್ರೆ ಹೇಗೆ? ಹೀಗಂತ ವಿಧಾನಸೌಧದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಅಲೆಮಾರಿ, ಅರೆ ಅಲೆಮಾರಿ ಸಂಘದ ಸದಸ್ಯರು. ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಜಾತಿಪತ್ರ, ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್,‌ ವಸತಿ ಸೌಲಭ್ಯ ಕೊಡಬೇಕು ಜೊತೆಗೆ ಉಚಿತ ಶಿಕ್ಷಣ ನೀಡಬೇಕು ಎಂಬೆಲ್ಲಾ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಇದಕ್ಕೆ ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬುದು ಸಮುದಾಯದ ಜನರ ಆಕ್ರೋಶವಾಗಿದೆ.

ಈ ಬಗ್ಗೆ ಅಲೆಮಾರಿ ಸಂಘದ ಅಧ್ಯಕ್ಷ ಶಿವಾನಂದ್ ಪಾಚಂಗಿ ಮಾತನಾಡಿ, ” ನಮ್ಮ ಸಮುದಾಯದಕ್ಕೆ ಅಲೆಮಾರಿ ಬುಡಕಟ್ಟು ಜನಾಂಗ ಅಂತ ಪತ್ರ ಕೊಡಬೇಕು. ಸ್ಕಾಲರ್ ಶಿಪ್, ವಸತಿ ಕೊಡಬೇಕು. ಉಚಿತ ಶಿಕ್ಷಣ ನೀಡಬೇಕು ಅಂತ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಅಲೆಮಾರಿಗಳಿಗೆ ಆಧಾರ್, ವೋಟರ್ ಐಡಿ ಇರಲ್ಲ. ಅಷ್ಟೇ ಅಲ್ಲ, ಅಲೆಮಾರಿಗಳಿಗೆ ಮನೆ ಇರಲ್ಲ,‌ ಎಲ್ಲೆಡೆ ಓಡಾಡ್ತಿದ್ದಾರೆ. ಎಸ್ಸಿ, ಎಸ್ಟಿ, ಓಬಿಸಿ ಅಲೆಮಾರಿಗಳಿದ್ದಾರೆ. ಕ್ರಿಶ್ಚಿಯನ್,‌ ಮುಸ್ಲಿಂ ಅಲೆಮಾರಿಗಳು ಇದ್ದಾರೆ ಎಂದು‌ ವಿವರಿಸಿದರು. ಈ ಎಲ್ಲಾ ಹಿನ್ನಲೆಯಲ್ಲಿ ಸಭೆ ಕರೆದು ಬೇಡಿಕೆ ಈಡೇರಿಸಲು ಮನವಿ ಮಾಡಿದ್ದೇವೆ. ನಾವು ನಿಮಗೆ ವೋಟ್ ಹಾಕಿದ್ದೇವೆ. ಸೌಲಭ್ಯ ಕೊಡದಿದ್ರೆ ಹೇಗೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!