ಉದಯವಾಹಿನಿ,ಕೋಲ್ಕತಾ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಒಗ್ಗಟ್ಟಿನ ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಗೆ ನಾಂದಿ ಹಾಡಲು ಜೂನ್ 23ರಂದು ಬಿಹಾರದಲ್ಲಿ ಬೃಹತ್ ಸಭೆ ನಡೆಯಲಿದೆ. ಆದರೆ ಅದಕ್ಕೂ ಮುನ್ನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ ಅನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದಾರೆ. ಆರಂಭದಿಂದಲೂ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸಣ್ಣನೆ ಬೆದರಿಕೆ ಒಡ್ಡುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ, ಒಲ್ಲದ ಮನಸಿನಿಂದಲೇ ಈ ಬಣಕ್ಕೆ ಕೈಜೋಡಿಸಲು ಮುಂದೆ ಬಂದಿದ್ದಾರೆ.

ಆದರೆ ಅದಕ್ಕೆ ಷರತ್ತುಗಳನ್ನೂ ವಿಧಿಸುತ್ತಿದ್ದಾರೆ. ಕಾಕದ್ವೀಪದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮಮತಾ, “ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಬಂಗಾಳದಲ್ಲಿ ಸಿಪಿಎಂ ಅತಿ ದೊಡ್ಡ ಮಿತ್ರ ಪಕ್ಷವಾಗಿದೆ. ಅವರು ಬಿಜೆಪಿಯ ದೊಡ್ಡ ಮಿತ್ರರು. ಆದರೆ ಅವರು ಸಂಸತ್‌ ಚುನಾವಣೆಗೆ ನಮ್ಮ ಸಹಾಯ ಕೇಳುತ್ತಿದ್ದಾರೆ” ಎಂದು ಸಿಪಿಎಂ ವಿರುದ್ಧ ಮಮತಾ ಗುಡುಗಿದ್ದಾರೆ. “ನಾವು ಬಿಜೆಪಿಯನ್ನು ವಿರೋಧಿಸಲು ಈಗಲೂ ಅದನ್ನು ಮಾಡುತ್ತೇವೆ. ಆದರೆ ನೆನಪಿಡಿ, ಬಂಗಾಳದಲ್ಲಿ ನೀವು ಸಿಪಿಎಂ ಜತೆ ಮೈತ್ರಿ ಮಾಡಿಕೊಂಡರೆ, ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಹಾಯ ಕೇಳಲು ಬರಬೇಡಿ” ಎಂದು ಕಾಂಗ್ರೆಸ್‌ಗೆ ತಾಕೀತು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!