ಉದಯವಾಹಿನಿ, ನವದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತೇ ಪರಮೋಚ್ಚ. ಇದರ ಮೇಲೆ ಆಕ್ರಮಣ ನಡೆಸುವುದಾ ಗಲಿ ಇಲ್ಲವೇ ಒತ್ತುವರಿ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಉಪರಾಷ್ಟ್ರಪತಿ ಜಗದೀಶ್ ಧನ್ಕರ್ ಮತ್ತೆ ನ್ಯಾಯಾಂಗದ ವಿರುದ್ಧವೇ ಗುಡುಗಿದ್ದಾರೆ.
ಕೆಲವು ದಿನಗಳ ಹಿಂದೆ ನ್ಯಾಯಾಂಗದ ಕಾರ್ಯ ವೈಖರಿ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಧನ್ಕರ್, ಸಂಸತ್ ಮೇಲೆ ನ್ಯಾಯಾಂಗದ ಅತಿಕ್ರಮಣವನ್ನು ಮತ್ತೆ ಕಟುವಾಗಿ ಟೀಕಿಸಿದ್ದರು.
ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊದರಲ್ಲಿ ಮಾತನಾಡಿದ ಅವರು, ಸಂಸತ್ ಸರ್ವೋಚ್ಚವಾಗಿದೆ. ಇಲ್ಲಿ ಜನಪ್ರತಿನಿಧಿಗಳು, ಮಾಸ್ಟರ್‌ರಸಗಳು ಸಂಸತ್‌ನ್ನು ಅತಿಕ್ರಮಣ ಮಾಡುವುದಾಗಲಿ ಒತ್ತುವರಿ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸುಪ್ರೀಂಕೋರ್ಟ್ ವಿರುದ್ಧವೂ ಕಿಡಿಕಾರಿದರು.
ಜನಪ್ರತಿನಿಧಿಗಳೇ ಅಂತಿಮ ಯಜಮಾನರು ಎಂಬುದನ್ನು ಯಾರೂ ಮರೆಯಬಾರದು. ಚುನಾವಣೆಗಳ ಮೂಲಕ ಸಾರ್ವಜನಿಕ ಪ್ರತಿನಿಧಿಗಳು ಸಂಸತ್‌ಗೆ ಉತ್ತರದಾಯಿಗಳಾಗಿದ್ದಾರೆ. ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಪ್ರಧಾನಿಯನ್ನೆ ಹೊಣೆಗಾರರನ್ನಾಗಿ ಮಾಡಿತ್ತು. ಪ್ರಜಾಪ್ರಭುತ್ವವು ಜನರಿಗಾಗಿ ಮತ್ತು ಅದನ್ನು ರಕ್ಷಿಸುವ ಭಂಡಾರವಾಗಿದೆ. ಇದು ಚುನಾಯಿತ ಪ್ರತಿನಿಧಿಗಳದ್ದು ಎಂದು ಒತ್ತಿ ಹೇಳಿದರು.ನಮ ಸಂಸತ್ ಸರ್ವೋಚ್ಛವಾಗಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಮುಖವಾಣಿಯಾಗಿದೆ. ನಾವು ಅದರ ರಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಹೇಗೆ ಅಮಾನತುಗೊಳಿಸಲಾಯಿತು ಎಂಬುದು ನಮ ಕಣ್ಣ ಮುಂದೆಯೇ ಇದೆ. ದೇಶದ 9 ಹೈಕೋರ್ಟ್‌ಗಳು ನೀಡಿದ್ದ ತೀರ್ಪುಗಳನ್ನು ತಳ್ಳಿಹಾಕಲಾಗಿತ್ತು. ಮೂಲಭೂತ ಹಕ್ಕುಗಳ ಅಮಾನತಿನ ಪರವಾಗಿ ಸುಪ್ರೀಂಕೋರ್ಟ್ ಹೇಗೆ ತೀರ್ಪು ನೀಡಿತ್ತು ಎಂಬುದನ್ನು ಸಹ ಉಪರಾಷ್ಟ್ರಪತಿಗಳು ಸರಿಸಿಕೊಂಡರು.
