ಉದಯವಾಹಿನಿ, ಬೆಂಗಳೂರು: ವಿವಿಧ ಕಡೆಗಳಲ್ಲಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ 17.90 ಲಕ್ಷ ರೂ. ಮೌಲ್ಯದ ಮೂರು ಕಾರು, 9 ದ್ವಿಚಕ್ರ ವಾಹನ,ಆಟೋರಿಕ್ಷಾ ಹಾಗೂ ಐೇನ್‌ ವಶಪಡಿಸಿಕೊಂಡಿದ್ದಾರೆ.ಕಾಡುಗೋಡಿ:ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳ ಜೊತೆಗೆ ಮೂರು ಕಾರುಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.ಪೊಲೀಸರು ಇವರಿಬ್ಬರನ್ನೂ ಸುದೀರ್ಘವಾಗಿ ವಿಚಾರಣೆ ನಡೆಸಿ ಮೂರು ಕಾರುಗಳ ಪೈಕಿ ಎರಡು ಕಾರುಗಳನ್ನು ದಿಣ್ಣೂರಿನ ಟೆಂಪೊ ನಿಲ್ದಾಣದ ಬಳಿ ಹಾಗೂ ಮತ್ತೊಂದು ಕಾರನ್ನು ವೈಟ್‌ಫೀಲ್‌್ಡ-ಹೊಸಕೋಟೆ ಮುಖ್ಯರಸ್ತೆಯ ಖಾಲಿ ಜಾಗದಿಂದ ವಶಪಡಿಸಿಕೊಂಡಿದ್ದು, ಸೊಣ್ಣೇನಹಳ್ಳಿ ನೀಲಗಿರಿ ತೋಪಿನಲ್ಲಿ ನಿಲ್ಲಿಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 10.40ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿಗಳ ಬಂಧನದಿಂದ ಐದು ವಾಹನ ಕಳವು ಪತ್ತೆಹಚ್ಚುವಲ್ಲಿ ಇನ್‌್ಸಪೆಕ್ಟರ್‌ ರಂಗಸ್ವಾಮಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಬಸವನಗುಡಿ:ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಂದ 1.60 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಸುರಕ್ಷಿತವಾಗಿ ಆತನನ್ನು ಪೋಷಕರ ಸುಪರ್ದಿಗೆ ನೀಡಿ ಕಳುಹಿಸಲಾಗಿದೆ.ಈತ ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುವ ಮೇರೆಗೆ ಆತನನ್ನು ತನಿಖೆ ವೇಳೆ ವಿಚಾರಣೆ ನಡೆಸಿ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಸವೀತಾ ಹಾಗೂ ಸಿಬ್ಬಂಧಿ ಯಶಸ್ವಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬಸವನಗುಡಿ ಠಾಣೆ ಪೊಲೀಸರು ಲಾಲ್‌ ಬಾಗ್‌ ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿ 54 ಸಾವಿರ ಬೆಲೆಯ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!