ಉದಯವಾಹಿನಿ, ಬಂಟ್ವಾಳ: ವಿವಿಧೆಡೆ ಗುಡುಗು ಸಹಿತ ಮಳೆ ಸುರಿದ ಪರಿಣಾಮ ಹಲವು ಮನೆಗಳಿಗೆ ಹಾನಿ ಉಂಟಾಗಿದ್ದು, ಅಡಿಕೆ ಮರಗಳಿಗೂ ಹಾನಿಯಾಗಿದೆ.
ಪಾಣೆಮಂಗಳೂರು ಗ್ರಾಮದ ಹಾಮದ್ ಬಾವ, ಉಸ್ಮಾನ್ ಎಂಬುವರ ಮನೆಯ ಹೆಂಚಿನ ಚಾವಣೆ ಹಾನಿಗೀಡಾಗಿದ್ದು, ಗ್ರಾಮದ ವಸಂತಿ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಶೇಖಬ್ಬ ಎಂಬುವರ ಮನೆ, ಗಿರಿಧರ್ ಕಾಮತ್ ಎಂಬುವರ ರೈಸ್ ಮಿಲ್‌ನ ಹೆಂಚಿನ ಚಾವಣಿಗೆ ಹಾನಿಯಾಗಿದೆ.ಮಣಿನಾಲ್ಕೂರು ಗ್ರಾಮದ ನೆಲ್ಯಪಲ್ಕೆ ಎಂಬಲ್ಲಿ ಕುಲ್ಕುಂಬಿ ಎಂಬುವರ ಮನೆಯ ಹಿಂಬದಿಯ ಗೋಡೆ ಬಿರುಕು ಬಿಟ್ಟಿದೆ. ಮನೆಯ ಸುಮಾರು 12 ಸಿಮೆಂಟ್ ಶೀಟ್ ಹಾನಿಗೀಡಾಗಿದೆ. ಕೊಟ್ಟುಂಜ ಎಂಬಲ್ಲಿ ಪ್ರವೀಣ್ ಅಳ್ಳ ಅವರ ಅಡಿಕೆ ತೋಟಕ್ಕೆ ಮರ ಬಿದ್ದ ಸುಮಾರು 35 ಅಡಿಕೆ ಮರಗಳು ಹಾನಿಗೀಡಾಗಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!