ಉದಯವಾಹಿನಿ, ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಜನರಲ್ಲಿ ಭಯವನ್ನು ಹುಟ್ಟುಹಾಕುವ ಘಟನೆಗಳು ಹೆಚ್ಚಾಗುತ್ತಿವೆ ಭಾರತೀಯರೆಲ್ಲರೂ ನಾವು ನಮ್ಮ ಜಾತಿ ವಿಚಾರಗಳನ್ನು ಮುಂದಿಟ್ಠುಕೊಂಡು ಎಲ್ಲಿಯವರೆಗೆ ನಮ್ಮಲ್ಲೇ ನಾವು ಭೇದಭಾವ ತೋರುವೆವೊ ಅಲ್ಲಿಯವರೆಗೂ ಪೆಹಲ್ಗಾಂವ್ ನಂತಹ ಕೃತ್ಯಗಳು ನಡೆಯುತ್ತಲೇ ಇರುತ್ತವೆ ಸಂಘಟನೆಗಳ ದಾಳಿ ತಪ್ಪಿದ್ದಲ್ಲ ನಮ್ಮ ಜಾತಿ-ಮತಗಳು ನಮ್ಮ ಮನೆಗಳ ಒಳಗೆ ಸೀಮಿತವಾಗಿರಬೇಕು ಮನೆಯಿಂದ ಹೊರಬಂದಮೇಲೆ ನಾವೆಲ್ಲ ಭಾರತೀಯರು ನಾವೆಲ್ಲ ಒಂದೇ ಎಂಬ ಸಂದೇಶ ಇಡೀ ವಿಶ್ವಕ್ಕೆ ರವಾನಿಸಬೇಕಿದೆ ಎಂದು ಯೋಗಗುರು ಹಾಗೂ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟರು.
ಕಾಶ್ಮೀರದ ಪೆಹಲ್ಗಂವನಲ್ಲಿ ಮಂಗಳವಾರ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯ ಖಂಡನೆ ಮತ್ತು ಭಯೋತ್ಪಾದಕರ ಗುಂಡಿಗೆ ಬಲಿಯಾದ ಅಮಾಯಕ ಭಾರತೀರಯರ ಸಾವಿಗೆ ಸಂತಾಪ ಸೂಚಿಸಲು ಚಿತ್ರದುರ್ಗದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸದಸ್ಯರು ನಗರದ ತುರುವನೂರು ರಸ್ತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಕಾಶ್ಮೀರದಲ್ಲಿ 370ನೇ ಕಾಯಿದೆ ರದ್ಧಾದ ನಂತರದಲ್ಲಿ ಕಾಶ್ಮೀರ ರಾಜ್ಯ ನಿಧಾನವಾಗಿ ಶಾಂತಿಯ ತೋಟವಾಗಿ ಬದಲಾಗುತಿತ್ತು ಬುಧವಾರ ನಡೆಸಿದ ಭಯೋತ್ಪಾದಕ ಘಟನೆಯಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಮರುಹುಟ್ಟುಹಾಕುವ ಪ್ರಯತ್ನ ಶತ್ರುದೇಶವಾದ ಪಾಕಿಸ್ಥಾನದ ಉಗ್ರರಿಂದ ನಡೆದಿದೆ ಈ ಘಟನೆಯನ್ನು ಭಾರತದ ಪ್ರತಿಯೊಬ್ಬ ನಾಗರೀಕರು ಖಂಡಿಸಬೇಕಾಗಿದೆ ಪಾಕೀಸ್ಥಾನಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್, ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸದಸ್ಯರಾದ ಮಹೇಶ್ ಡಿ, ಶ್ರೀಮತಿ ವನಜಾಕ್ಷಮ್ಮ, ತಿಪ್ಪಮ್ಮ, ನಳಿನಾಕ್ಷಿ, ಸರಸ್ವತಿ, ಅರುಣ, ದುರ್ಗಾಂಬಿಕಾ, ಚೈತ್ರಾ, ಸುನೀತಾ, ಸುಜಾತ, ಭಾಗ್ಯಮ್ಮ ಅನಿತಾ, ಯೋಗ ಶಿಕ್ಷಕರಾದ ಶ್ರೀಮತಿ ಮಂಜುಳಾ, ವಸಂತಲಕ್ಷ್ಮೀ ಹಾಗೂ ಬ್ಯಾಂಕ್ ಕಾಲೋನಿ ನಾಗರೀಕರು ಭಾವಹಿಸಿ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ದಾಳಿಗೆ ಬಲಿಯಾದ ಅಮಾಯಕ ಭಾರತೀಯರ ಸಾವಿಗೆ ಕಂಬನಿ ಮಿಡಿದರು.
