ಉದಯವಾಹಿನಿ, ನವದೆಹಲಿ: ಇಡೀ ದೇಶದ ಆಸಿತೆಯನ್ನೇ ಬಡಿದೆಬ್ಬಿಸಿರುವ ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭೀಭತ್ಸ ನರಮೇಧಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಾಪಿ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರ ಮುಟ್ಟು ನೋಡಿಕೊಳ್ಳುವಂತಹ ಪೆಟ್ಟು ನೀಡಬೇಕೆಂದು ಆಗ್ರಹಿಸಿದ್ದಾರೆ.ದೇಶದ ಗಡಿ, ಜನ, ಜೀವನ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹ ಜೋರಾಗಿದೆ. ದೇಶದ ಆರ್ಥಿಕತೆಗೆ ಹೊಡೆದ ಬಿದ್ದರೂ ಪರವಾಗಿಲ್ಲ. ವೈರಿಗಳನ್ನು ನಿರ್ನಾಮ ಮಾಡಿ, ಒಳ ಹೊಕ್ಕು ಹೊಡೆದು ಭಾರತವು ಧೈರ್ಯ ಸಾಹಸ ಮೆರೆಯಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ದೇಶವನ್ನೇ ತಲ್ಲಣಗೊಳಿಸಿದ ಉಗ್ರರ ಹೇಯ ಕೃತ್ಯ, ಪ್ರವಾಸಿಗರ ಸಾವುನೋವು ದೇಶದ ಜನರ ನಿದ್ದೆಗೆಡಿಸಿದೆ. ಹಿಂದೂಗಳನ್ನಷ್ಟೇ ಟಾರ್ಗೆಟ್‌ ಮಾಡಿ ಪಾಯಿಂಟ್‌ ಬ್ಲಾಂಕ್‌ ರೇಂಜ್ನಿಂದ ಹೊಡೆದು ಹಾಕಿರುವುದು ಅಸಹನೀಯ. ಭಾರತ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿ ಬಂದಿದೆ.
ಯುದ್ಧಕ್ಕೆ-ಯುದ್ಧ, ರಕ್ತಕ್ಕೆ-ರಕ್ತವಾದ ಎಂಬಂತಾದರೆ ದೇಶದ ಸ್ಥಿತಿಗತಿ, ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು ಎಂಬ ಅಂದಾಜಿದ್ದರೂ ಸಹಿತ, ಅದೆಲ್ಲ ಆಮೇಲೆ ನೋಡಿಕೊಳ್ಳೋಣ ಎಂಬ ಮಾತುಗಳು ಕೇಳಿಬರುತ್ತಿವೆ.ಬೆಂಗಳೂರಿನ ಐಟಿ ವಾಸ್ತುಶಿಲ್ಪಿ, ಡಾ.ರಾಜ್‌ಕುಮಾರ್‌ ಅಭಿಮಾನಿಯಾಗಿರುವ ಅಮರನಾಥ್‌ ಶಿವಶಂಕರ್‌ ಅವರು ಸಹ ವೈಯಕ್ತಿಕವಾಗಿ, ಭಾರತದ ಗಡಿಗಳನ್ನು ಭದ್ರಗೊಳಿಸುವ ಪ್ರಕ್ರಿಯೆಯಲ್ಲಿ ಭಾರತ ಯುದ್ಧ ಸಾರಿ ವೈರಿಗಳ ಸಂಹಾರ ಮಾಡಬೇಕು. ಭಾರತದ ಆರ್ಥಿಕ ಸ್ಥಿತಿ ತಾತ್ಕಾಲಿಕ ಹೊಡೆತ ತಿಂದರೂ ನಾನು ಅದನ್ನು ಜೀರ್ಣಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಹಾಗೆಯೇ ಬೆಂಗಳೂರಿನ ಅಭಿವೃದ್ಧಿಗೆ ಕಡಿವಾಣ ಹಾಕಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಬೆಲೆ ಕುಸಿದರೆ, ಅದೂ ಆಗಲಿ. ನನ್ನ ರಿಯಲ್‌ ಎಸ್ಟೇಟ್‌ ಹೂಡಿಕೆಯ ಲಾಭದ ಪ್ರಮಾಣ ಕುಗ್ಗಿದರೂ ಸರಿ. ಜನರ ಬದುಕು ಹಸನಾಗಲಿ. ನೆಮದಿ ಮತ್ತು ಆರೋಗ್ಯ ಇದ್ದರೆ ಹಣ ಗಳಿಸಬಹುದು ಎಂದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕ ಹಿಂದೂಗಳಿಗೆ ಕಷ್ಟ ಎದುರಾದರೂ ಪರವಾಗಿಲ್ಲ. ಶತ್ರುಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!