ಉದಯವಾಹಿನಿ,ಬೆಂಗಳೂರು: ರೋಡ್ ಕಿಂಗ್’ ಎಂಬ ಸಿನಿಮಾವೊಂದು ತೆರೆಗೆ ಬರುತ್ತಿರುವ ಸುದ್ದಿಯನ್ನು ನೀವು ಓದಿರುತ್ತೀರಿ. ಚಿತ್ರ ಜೂ.23ರಂದು ತೆರೆಕಾಣುತ್ತಿದೆ. ಇದು ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ನಿರ್ದೇಶಿಸಿರುವ ಸಿನಿಮಾ. ದೂರದ ಅಮೆರಿಕಾದಲ್ಲಿ ಕುಳಿತು ಸ್ಕೈಪ್ ಮೂಲಕ ಈ ಚಿತ್ರವನ್ನು ನಿರ್ದೇಶಿಸಲಾಗಿದೆ. ಮತೀನ್ ಹುಸೇನ್ ಈ ಚಿತ್ರದ ಹೀರೋ. ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ಸ್ಕೈಪ್ ಮೂಲಕ ಸಿನಿಮಾ ನಿರ್ದೇಶಿಸಿದ ರಾಂಡಿ ಕೆಂಟ್ ಕೂಡಾ ಹಾಜರಿದ್ದರು. ಈ ವೇಳೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ತೋರಿಸಲಾಯಿತು. ಸ್ಕೈಪ್ ಮೂಲಕ ಸಿನಿಮಾ ನಿರ್ದೇಶಿಸುವುದು ತುಂಬಾ ಸವಾಲು. ರಾತ್ರಿ ಹಗಲು ಕೆಲಸ ಮಾಡಬೇಕಿತ್ತು. ಇಡೀ ತಂಡದ ಪ್ರೋತ್ಸಾಹ ಸಿನಿಮಾ ಮೇಲಿನ ಪ್ರೀತಿಯಿಂದ ಸಾಧ್ಯವಾಯಿತು’ ಎನ್ನುವುದು ನಿರ್ದೇಶಕ ರಾಂಡಿ ಕೆಂಟ್ ಮಾತು.
ನಾಯಕ ಮತೀನ್ ಹುಸೇನ್ ಹಾಗೂ ರಾಂಡಿ ಕೆಂಟ್ ಸ್ನೇಹಿತರು. “ಕೋಲಾರದಲ್ಲಿ ನಡೆದ ನೈಜ ಘಟನೆ ಆಧರಿಸಿ ಒಂದು ಸಣ್ಣ ಬಜೆಟ್‌ನ ಚಿತ್ರ ಮಾಡುವುದಕ್ಕೆ ಹೊರಟಾಗ, ಸೂಕ್ತ ನಿರ್ದೇಶಕರು ಸಿಗಲಿಲ್ಲ.. ಆಗ ಅವರಿಗೆ ರಾಂಡಿ ಕೆಂಟ್. ನಾನು ಮತ್ತು ರಾಂಡಿ ಹಳೆಯ ಸ್ನೇಹಿತರು. ಸ್ನೇಹದಲ್ಲಿ ಚಿತ್ರ ಮಾಡಿಕೊಡುವುದಕ್ಕೆ ಕೇಳಿಕೊಂಡಾಗ, ಮೊದಲು ರಾಂಡಿ ಹಿಂದೇಟು ಹಾಕಿದರು. ಕಾರಣ, ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿರುವುದು. ಕೊನೆಗೆ ಒಪ್ಪಿ ಅವರು ಚಿತ್ರ ನಿರ್ದೇಶನಕ್ಕೆ ಕೈಹಾಕಿದರು. ವೀಸಾ ಸಮಸ್ಯೆಯಿಂದಾಗಿ ಅವರಿಗೆ ಇಲ್ಲಿ ಬಂದು ಸಿನಿಮಾ ಮಾಡಲು ಆಗಲಿಲ್ಲ. ಹಾಗಾಗಿ, ಸ್ಕೈಪ್ ಮೂಲಕ ಮಾಡಿದೆವು’ ಎಂದರು ಮತೀನ್. ಚಿತ್ರಕ್ಕೆ ಕ್ರೇಜಿಮೈಂಡ್ಸ್ ಶ್ರೀ ಸಂಕಲನವಿದೆ. ಅವರು ಸಿನಿಮಾ ಚೆನ್ನಾಗಿ ಮೂಡಿ ಬಂದ ಹಾಗೂ ಸ್ಕೈಪ್ ಮೂಲಕ ನಿರ್ದೇಶನ ಮಾಡಿದ ನಿರ್ದೇಶಕ ಹಾಗೂ ತಂಡದ ಬಗ್ಗೆ ಮಾತನಾಡಿದರು.
