ಉದಯವಾಹಿನಿ, ನವದೆಹಲಿ: ದೇಶವನ್ನೇ ಬಡಿದೆಬ್ಬಿಸಿರುವ ಜಮುಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಬೀಭತ್ಸ ಘಟನೆಗೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಯ್ಯದ್ ಹಫೀಜ್ ರೂವಾರಿ ಎಂಬುದು ಬೆಳಕಿಗೆ ಬಂದಿದೆ.ಜಮು-ಕಾಶೀರಕ್ಕೆ ಈ ಹಿಂದೆ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ನಂತರ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ.
ಪ್ರಸ್ತುತ ಪಾಕಿಸ್ತಾನದಲ್ಲಿ ಲಷ್ಕರ್-ಇ-ತೊಯ್ಬಾ ಎಂಬ ಉಗ್ರಗಾಮಿ ಸಂಘಟನೆಯನ್ನು ಕಟ್ಟಿಕೊಂಡಿರುವ ಸಯ್ಯದ್ ಹಫೀಜ್ ಕಣಿವೆ ರಾಜ್ಯದಲ್ಲಿ ಸ್ಥಳೀಯ ಯುವಕರು ಮತ್ತು ಬಾಡಿಗೆ ಭಂಟರ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದ.ಅದರಲ್ಲೂ ಕಳೆದ ಎರಡು ವರ್ಷಗಳಿಂದ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು, ಉಗ್ರರ ಉಪಟಳ ನಿಧಾನವಾಗಿ ಕ್ಷೀಣಿಸುತ್ತಾ ಪರಿಸ್ಥಿತಿ ಸಹಜಸ್ಥಿತಿಗೆ ಮರಳಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳು ನಿಧಾನವಾಗಿ ಏರಿಕೆಯಾಗುತ್ತಿದ್ದುದು ಈತನಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ.
ಹೇಗಾದರೂ ಮಾಡಿ ಜಮುಕಾಶೀದ ಯಾವುದಾದರೊಂದು ಪ್ರದೇಶದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಕಳೆದ ಹಲವು ತಿಂಗಳಿನಿಂದ ಹೊಂಚು ಹಾಕಿ ಕುಳಿತಿದ್ದ. ಹೀಗಾಗಿಯೇ ಪಾಕ್ ಆಕ್ರಮಿತ ಕಾಶೀರ ಮತ್ತು ಕಾಶೀರದಲ್ಲಿ ಸ್ಥಳೀಯ ಯುವಕರು ಮತ್ತು ಬಾಡಿಗೆ ಭಂಟರನ್ನು ಭಯೋತ್ಪಾದನೆ ಚಟುವಟಿಕೆಗೆ ಬಳಸಿಕೊಳ್ಳಲ ಪ್ರೇರೇಪೇಣೆ ನೀಡಿದ್ದ.ಒಬ್ಬ ಹಿಂದೂವನ್ನು ಕೊಂದು ಹುತಾತರಾದರೆ ಸ್ವರ್ಗದಲ್ಲಿ ನಿಮನ್ನು 80 ಸಖಿಯರಿಂದ ನಿಮಗೆ ಪುಣ್ಯ ಬರಲಿದೆ ಎಂದು ಪ್ರಚೋದಿಸಿದ್ದಾರೆ. ಇದನ್ನು ನಂಬಿದ ಕೆಲವು ವಿದ್ಯಾವಂತ ಯುವಕರು ಸ್ವರ್ಗಕ್ಕೆ ಹೋಗುವ ದುರಾಲೋಚನೆ ಮತ್ತು ಹಣದಾಸೆಗೆ ಬಿದ್ದು ಲಷ್ಕರ್-ಇ-ತೊಯ್ಬಾ ಸಂಘಟನೆಗೆ ಸೇರ್ಪಡೆಗೊಂಡಿದ್ದರು.
ಈ ಬಾಡಿಗೆ ಭಂಟರೇ ಕಳೆದ ಮಂಗಳವಾರ ಪಹಲ್ಗಾಮ್‌ನ ಬೈಸರ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಲು ಕೈ ಜೋಡಿಸಿದ್ದಾರೆಂಬ ಶಂಕೆ ಇದೆ. ಈ ಹಿಂದೆ 2008, ನವೆಂಬರ್ 26ರಂದು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ನಡೆದ ದಾಳಿಯಲ್ಲಿ ಈತನೇ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ.
