ಉದಯವಾಹಿನಿ, ಇಸ್ಲಾಮಾಬಾದ್‌: ಬಲೂಚಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್‌ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಬಲೂಚ್‌ ಲಿಬರೇಶನ್‌ ಆರ್ಮಿ ದಾಳಿ ನಡೆಸಿದ್ದು, ಪಾಕ್‌ ಸೇನೆಯ 10 ಸಿಬ್ಬಂದಿಯನ್ನು ಹತ್ಯೆ ಮಾಡಿದೆ. ಬಲೂಚ್‌ ಲಿಬರೇಶನ್‌ ಆರ್ಮಿ ಈ ದಾಳಿಯ ಜವಾಬ್ದಾರಿ ಹೊತ್ತುಕೊಂಡಿದೆ. ದಿಬಲೂಚ್‌ ಲಿಬರೇಶನ್‌ ಆರ್ಮಿ(ಬಿಎಲ್‌ಎ) ಪಾಕಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್‌ನಲ್ಲಿ ಪಾಕಿಸ್ತಾನಿ ಸೇನಾ ಸಿಬ್ಬಂದಿಯ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ರಿಮೋಟ್‌ ಕಂಟ್ರೋಲ್‌್ಡ ಐಇಡಿ ದಾಳಿ ನಡೆಸಲಾಗಿದೆ. ಬಲೂಚ್‌ ದಂಗೆಕೋರರಿಂದ ಪಾಕ್‌ ಸೇನೆಯ ಸುಬೇದಾರ್‌ ಶೆಹಜಾದ್‌ ಅಮೀನ್‌, ನಯಬ್‌ ಸುಬೇದಾರ್‌ ಅಬ್ಬಾಸ್‌‍, ಸಿಪಾಯಿ ಖಲೀಲ್‌, ಸಿಪಾಯಿ ಜಾಹಿದ್‌, ಸಿಪಾಯಿ ಖುರ್ರಂ ಮತ್ತು ಇತರರು ಹತ್ಯೆಗೀಡಾಗಿದ್ದಾರೆ. ಕ್ವೆಟ್ಟಾದ ಹೊರವಲಯದಲ್ಲಿರುವ ಮಾರ್ಗಾಟ್‌ನಲ್ಲಿ ಸೇನೆಯ ವಾಹನಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

ರಿಮೋಟ್‌ ಕಂಟ್ರೋಲ್‌ ಬಳಸಿ ಈ ದಾಳಿ ಮಾಡಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದ್ದು, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗೆ ಇದು ಮತ್ತೊಂದು ಉದಾಹರಣೆಯಾಗಿದೆ.ನಮ ಹೋರಾಟಗಾರರು ಸೇನೆಯ ವಾಹನವನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ಬಿಎಲ್‌ಎ ಹೇಳಿದ್ದು, ಸ್ಫೋಟದಲ್ಲಿ ವಾಹನವು ಸಂಪೂರ್ಣವಾಗಿ ನಾಶವಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸೇನೆಯ ವಿರುದ್ಧದ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದಾಗಿ ಬಲೂಚ್‌ ಲಿಬರೇಶನ್‌ ಆರ್ಮಿ ಎಚ್ಚರಿಕೆ ನೀಡಿದೆ. ನಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಿಲ್ಲುವುದಿಲ್ಲ. ನಾವು ನಮೆಲ್ಲಾ ಶಕ್ತಿಯಿಂದ ಶತ್ರುಗಳನ್ನು ಗುರಿಯಾಗಿಸುತ್ತೇವೆ, ಎಂದು ಘೋಷಿಸಿದೆ. ಗುರುವಾರ ಕೂಡ ಬಿಎಲ್‌ಎ ಬಲೂಚಿಸ್ತಾನದ ವಿವಿಧೆಡೆ ಏಳು ಜನ ಪಾಕಿಸ್ತಾನ ಸೈನಿಕರನ್ನು ಕೊಂದಿತ್ತು. ಈ ಘಟನೆಗಳಲ್ಲಿ ನಾಲ್ಕು ಜನರಿಗೆ ಗಾಯಗಳಾಗಿತ್ತು. ಜಮುರಾನ್‌, ಕೊಲ್ವಾ ಮತ್ತು ಕಲತ್‌ ಜಿಲ್ಲೆಗಳಲ್ಲಿ ಈ ದಾಳಿಗಳು ನಡೆದಿದ್ದವು. ಕೆಲವು ಕಡೆಗಳಲ್ಲಿ ಭದ್ರತಾ ಠಾಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!