ಉದಯವಾಹಿನಿ,ಇಸ್ಲಾಮಾಬಾದ್: ಪಹಲ್ಟಾಮ್ ದಾಳಿ ನಂತರ ಪಾಕಿಸ್ತಾನದ ನಾಗರಿಕರಲ್ಲಿ ತಮ್ಮ ಸೇನೆಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥರ ರಾಜೀನಾಮೆ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು, ಬಳಕೆದಾರರು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಐಎಸ್‌ಐ ಮತ್ತು ಭಯೋತ್ಪಾದಕ ಗುಂಪುಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ದೂಷಿಸುತ್ತಿದ್ದಾರೆ. ಕೆಲವು ಬಳಕೆದಾರರು, ಪಾಕಿಸ್ತಾನಿ ಸೇನೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ ಮತ್ತು ನಮ್ಮ ಆರ್ಥಿಕತೆಯು ಹಾಳಾಗುತ್ತಿದೆ ಎಂದು ಬರೆದಿದ್ದಾರೆ. ಈ ಸಾರ್ವಜನಿಕ ಕೋಪವು ಪಾಕಿಸ್ತಾನದ ಆಂತರಿಕ ಅಸ್ಥಿರತೆಯನ್ನು ಎತ್ತಿ ತೋರಿಸುತ್ತದೆ.
ಪಹಲ್ಟಾಮ್ ದಾಳಿಯ ನಂತರ, ಜಾಗತಿಕವಾಗಿ ಏಕಾಂಗಿಯಾಗುವುದನ್ನು ತಪ್ಪಿಸಲು ಪಾಕಿಸ್ತಾನ ತನ್ನ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಇಶಾಕ್ ದಾರ್ ಅವರು ಅಜೆಬರ್ ರೈಜಾನ್ ಮತ್ತು ಈಜಿಪ್ಟ್ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ದಾರ್ ಚರ್ಚಿಸಿದರು ಮತ್ತು ಬೆಂಬಲದ ಭರವಸೆ ವ್ಯಕ್ತಪಡಿಸಿದರು. ಆದಾಗ್ಯೂ, ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನದ ವಿಶ್ವಾಸಾರ್ಹತೆ ದುರ್ಬಲಗೊಳ್ಳುವುದರಿಂದ ಈ ಪ್ರಯತ್ನಗಳು ವಿಫಲವಾಗಬಹುದು ಎಂದು ವಿಶ್ಲೇಷಕರು ಊಹಿಸಿದ್ದಾರೆ.
ಭಯೋತ್ಪಾದಕ ಸಹಾಯಕರ ಮೇಲೆ ದಾಳಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಹಾಯಕರ ವಿರುದ್ಧ ಪ್ರಮುಖ ಕಾರ್ಯಾಚರಣೆ
ಆರಂಭಿಸಲಾಗಿದೆ. ಶ್ರೀನಗರದ 64 ಸ್ಥಳಗಳಲ್ಲಿ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದಾಳಿ ನಡೆಸಲಾಯಿತು. ಟಿಆ‌ರ್ ಎಫ್ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಲಾಜಿಸ್ಟಿಕ್ಸ್ ಪೂರೈಕೆಯಲ್ಲಿ ಭಾಗಿಯಾಗಿದ್ದ ಇಬ್ಬರು ಭಯೋತ್ಪಾದಕ ಸಹಾಯಕರನ್ನು ಕುಲ್ಲಾಮ್‌ನಿಂದ ಬಂಧಿಸಲಾಯಿತು. ಗುಪ್ತಚರ ಸಂಸ್ಥೆಗಳು ಸ್ಥಳೀಯ ಜಾಲವನ್ನು ಕಿತ್ತುಹಾಕುವಲ್ಲಿ ನಿರತವಾಗಿವೆ.

Leave a Reply

Your email address will not be published. Required fields are marked *

error: Content is protected !!