ಉದಯವಾಹಿನಿ, ವ್ಯಾಟಿಕನ್ ಸಿಟಿ: ಕಡು ಸಂಪ್ರದಾಯಸ್ಮರ ತೀವ್ರ ವಿರೋಧ ಟೀಕೆಗಳ ಮಧ್ಯೆಯೂ ಹಲವು ಸುಧಾರಣಾವಾದಿ ಕ್ರಾಂತಿಕಾರಕ ಕ್ರಮಗಳನ್ನು ತೆಗೆದುಕೊಂಡಿದ್ದ, ‘ಜನರ ಪೋಪ್’ ಎಂದೇ ಕರೆಸಿಕೊಳ್ಳುತ್ತಿದ್ದ ಪೋಪ್ ಫ್ರಾನ್ಸಿಸ್ ಅವರಿಗೆ ಇಲ್ಲಿನ ಸೇಂಟ್ ಪೀಟರ್ಸ್ ಸೈರ್‌ನಲ್ಲಿ ಶನಿವಾರ ಅಂತಿಮ ವಿದಾಯ ಹೇಳಲಾಯಿತು. ಪೋಪ್ ಅವರ ಅಂತ್ಯ ಸಂಸ್ಕಾರದ ಕ್ಷಣಗಳನ್ನು ಕಣ್ಣುಂಬಿಕೊಳ್ಳಲು ಜಗತ್ತಿನ ವಿವಿಧ ಭಾಗಗಳ ಸುಮಾರು 4 ಲಕ್ಷ ಜನರು ಸೇರಿದ್ದರು. ಇವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತಿಮ ವಿಧಿ ವಿಧಾನಗಳನ್ನು ಹತ್ತಿರದಿಂದ ನೋಡಬೇಕು ಎಂದು ಬಯಸಿ ವಿವಿಧ ದೇಶಗಳಿಂದ ಪುಟ್ಟ ಮಕ್ಕಳೊಂದಿಗೆ ಬಂದಿದ್ದ ಕುಟುಂಬಗಳು ಶುಕ್ರವಾರ ರಾತ್ರಿಯಿಂದಲೇ ಸೈರ್‌ನಲ್ಲಿ ಸೇರಿದ್ದವು. ಸಾರ್ವಜನಿಕರಿಗಾಗಿ ಸಿದ್ಧಪಡಿಸಿದ್ದ ಆಸನಗಳಲ್ಲಿ ಕೆಲವರು ಕುಳಿತುಕೊಂಡಿದ್ದರೆ, ಕೆಲವರು ಅಲ್ಲೇ ಮಲಗಿದ್ದರು. ಮತ್ತೆ ಕೆಲವರು ಕಾರುಗಳಲ್ಲೇ ರಾತ್ರಿ ಕಳೆದು ಬೆಳಗಿನ ಜಾವ ಸೇಂಟ್ ಪೀಟರ್ಸ್ ಸ್ಮರ್‌ಗೆ ಬಂದರು.

Leave a Reply

Your email address will not be published. Required fields are marked *

error: Content is protected !!