ಉದಯವಾಹಿನಿ, ಬದ್ರಿನಾಥ್ : ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಬದರಿನಾಥ್ ದೇವಾಲಯಗಳನ್ನು ಇಂದು ಸಾರ್ವಜನಿಕ ದರ್ಶನಕ್ಕೆ ತೆರೆಯಲಾಗಿದೆ. ಈ ದೇವಾಲಯದ ಆರೋಪಿಗಳಿಂದ ಮುಚ್ಚಲ್ಪಟ್ಟಿತ್ತು.  ವೇದ ಮಂತ್ರಗಳ ನಡುವೆ ದೇವಾಲಯದ ಬಾಗಿಲುಗಳನ್ನು ಇಂದು ಬೆಳಿಗ್ಗೆ ೬ ಗಂಟೆಗೆ ತೆರೆಯಲಾಯಿತು. ವಿವಿಧ ಬಗೆಯ ಹೂವುಗಳಿಂದ ದೇವಾಲಯಕ್ಕೆ ಅಲಂಕಾರ ಮಾಡಲಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಸೇನೆ ಭಕ್ತಿಗೀತೆ ನುಡಿಸಿತು.ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್, ತೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಮೊದಲಿಗೆ ಬದರಿನಾಥ ಧಾಮ ಮುಖ್ಯ ಅರ್ಚಕ ಹಾಗೂ ಧರ್ಮಾಧಿಕಾರಿ ಮೊದಲು ವಿಶೇಷ ಪೂಜೆ ನೆರವೇರಿಸಿದರು. ಮುಖ್ಯ ದೇವಾಲಯ ಹಾಗೂ ಬದರಿನಾಥ ಧಾಮದಲ್ಲಿರುವ ಗಣೇಶ, ಘಂಟಕರಣ, ಆದಿ ಕೇದೇಶ್ವರ, ಆದಿ ಗುರು ಶಂಕರಾಚಾರ್ಯ ಮತ್ತು ಮಾತಾ ಮೂರ್ತಿ ದೇವಸ್ಥಾನಗಳನ್ನು ಬಾಗಿಲುಗಳನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ.
ಬದರಿನಾಥ ದರ್ಶನಕ್ಕೆ ಬರುವ ಭಕ್ತರ ಸುರಕ್ಷತೆ ಮತ್ತು ದರ್ಶನ ಸುಗಮಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ದೀಪಾವಳಿ ಬಳಿಕ ಚಾರ್ ಧಾಮಗಳಾದ ಬದರಿನಾಥ, ಕೇದರನಾಥ್, ಗಂಗ್ರೋತಿ ಹಾಗೂ ಯಮುನೋತ್ರಿ ದೇಗುಲಗಳ ಬಾಗಿಲುಗಳನ್ನು ಮುಚ್ಚಲಾಗಿತ್ತು.
ಏ.ಮೇ ತಿಂಗಳಲ್ಲಿ ಈ ದೇಗುಲಗಳ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿ ದರ್ಶನ ಪಡೆದು ಪುನೀತರಾಗುತ್ತಾರೆ.
ಹಿಮಾಲಯ ತಪ್ಪಲಿನ ಕೇದರನಾಥ್ ದೇಗುಲದ ಬಾಗಿಲನ್ನು ಕಳೆದ ಶುಕ್ರವಾರವೇ ತೆರೆಯಲಾಗಿತ್ತು. ಗಂಗೋತ್ರಿ, ಯಮುನೋತ್ರಿ ದೇವಾಲಯವನ್ನು ದ್ವಾರವನ್ನು ಮೇ ೩೦ ರಂದೇ ತೆರೆಯಲಾಗಿತ್ತು.

Leave a Reply

Your email address will not be published. Required fields are marked *

error: Content is protected !!