ಉದಯವಾಹಿನಿ, ಬೆಂಗಳೂರು: ಭಾರತದಲ್ಲಿ ಜೀವನ ವೆಚ್ಚ ಹೆಚ್ಚುತ್ತಿರುವ ಬಗ್ಗೆ ಐಐಟಿ ಬಾಂಬೆ ಪದವೀಧರರೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ಇದು ಸಣ್ಣ ಪಟ್ಟಣಗಳನ್ನು ಸಹ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ನಿವಾಸಿ ಮೊನಾಲಿ ದಂಬ್ರೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಈ ಪೋಸ್ಟ್ ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಮೊನಾಲಿ ಬೆಂಗಳೂರು ಭಾರತದ ಅತ್ಯಂತ ದುಬಾರಿ ನಗರ ಎಂದು ಹೇಳಿದ್ದಾರೆ. ಈ ಪೋಸ್ಟ್ ಬೆಂಗಳೂರಿನ ಹಣದುಬ್ಬರವನ್ನು ಪುಣೆ, ಅಹಮದಾಬಾದ್, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ ನಗರಗಳೊಂದಿಗೆ ಹೋಲಿಸಿದೆ ಮತ್ತು ಜೀವನ ವೆಚ್ಚ, ಬಾಡಿಗೆ, ಆಹಾರ ಮತ್ತು ಪ್ರಯಾಣ ವೆಚ್ಚ ಇಲ್ಲಿ ಅತ್ಯಧಿಕವಾಗಿದೆ ಎಂದು ತೋರಿಸಿದೆ.
ಮುಂಬರುವ ವರ್ಷಗಳಲ್ಲಿ ಮಧ್ಯಮ ಮತ್ತು ಕೆಳವರ್ಗದವರು ಹೇಗೆ ಬದುಕುಳಿಯುತ್ತಾರೆ ಎಂಬುದರ ಬಗ್ಗೆ ಅವರು ತೀವ್ರ ಚಿಂತಿಸುವಂತಾಗಿದೆ ಎಂದಿದ್ದಾರೆ. ತನ್ನ ವೈಯಕ್ತಿಕ ಅನುಭವದ ಪ್ರಕಾರ, ಬೆಂಗಳೂರಿನಲ್ಲಿ ತನ್ನ ದಿನಸಿ ಬಿಲ್‌ಗಳು ಗಗನಕ್ಕೇರುತ್ತಿವೆ ಇದು ಕೇವಲ ದಿನನಿತ್ಯದ ಅಗತ್ಯ ಸಾಮಗ್ರಿಗಳ ಬಿಲ್ ಇದರಲ್ಲಿ ಅಲಂಕಾರಿಕ ಐಷಾರಾಮಿ ವಸ್ತುಗಳು ಸೇರಿಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿ ಜೀವನ ವೆಚ್ಚ ತುಂಬಾ ದುಬಾರಿಯಾಗುತ್ತಿದೆ ಎಂಬ ಅಂಶವನ್ನು ನಾನು ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದೇನೆ – ಸಣ್ಣ, ಟೈಯರ್ -೩ ನಗರಗಳಲ್ಲಿಯೂ ಸಹ ಎಂದು ಅವರು ಬರೆದಿದ್ದಾರೆ.
