ಉದಯವಾಹಿನಿ,ಕೆಂಗೇರಿ: ಬಸವ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಯಶಸ್ವಿಯಾಗುತ್ತದೆ. ಇಡೀ ಜಗತ್ತಿಗೆ ಸಮಾನತೆಯ ತತ್ವ ಕೊಟ್ಟವರು ಬಸವಣ್ಣನವರು. ಎಲ್ಲರ ದೇವರು ಒಬ್ಬನೇ ಎಂದು ಬಸವಣ್ಣ ಹೇಳಿದ್ದಾರೆ. ಅದರಂತೆ ನಡೆಯಬೇಕು ಎಂದು ಮೇಲಣಗವಿ, ವೀರ ಸಿಂಹಾಸನ ಮಠ ಶಿವಗಂಗಾ ಕ್ಷೇತ್ರದ ಶ್ರೀ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ರಾಜರಾಜೇಶ್ವರಿ ನಗರದ ಬಿ.ಇ.ಎಂ.ಎಲ್ ಬಡಾವಣೆಯ ಶ್ರೀ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಜಗದ್ಗುರು ಪಂಚಾಚಾರ್ಯ ಯೋಗ ಮನೋತ್ಸವ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಜನ್ಮೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಬಸವಣ್ಣನವರ ಬೋಧನೆಗಳನ್ನು ನಮ್ಮಲ್ಲಿ ಸ್ಮರಿಸುವ ಮತ್ತು ಹರಡುವ ಒಂದು ಸಂದರ್ಭವಾಗಿದೆ. ಅವರ ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಕೆಲಸದ ಮೇಲಿನ ಭಕ್ತಿಯ ಸಂದೇಶವು ಭಾರತದಾದ್ಯಂತ ಜನರನ್ನು ಪ್ರೇರೇಪಿಸುತ್ತಲೇ ಬಸವಣ್ಣನವರು ಸರಳವಾದ ವಚನಗಳ ಮೂಲಕ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಮಾಜವನ್ನು ಬದಲಾಯಿಸಿದ ಮಹಾನ್ ವ್ಯಕ್ತಿ.ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕೊಟ್ಟು ಸಕಲ ಜೀವಾತ್ಮರಿಗೆ ಲೇಸು ಬಯಸಿದವರು ಬಸವಣ್ಣನವರು. ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಅಶೋಕ್ ಕಡಪಟ್ಟಿ ಸೋಮಲಿಂಗಪ್ಪ ಉಡಚ್ಯಣ, ಶಿವನಂಜಪ್ಪ, ಡಿ.ಎಸ್. ಬಸವನಂದ ಪ್ರಕಾಶ್, ಚೇತನ್ ಕುಮಾರ್ ವಳಸಂಗದ ಹಾಗೂ ಸಂಘದ ಇಲ್ಲ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!