ಉದಯವಾಹಿನಿ, ಕೊಣನೂರು: ಕಸದ ವ್ಯವಸ್ಥಿತ ನಿರ್ವಹಣೆಯಿಲ್ಲದೇ ಕಾವೇರಿ ನದಿ ದಂಡೆಯು ಕಸದ ತೊಟ್ಟಿಯಾಗಿ ಮಾರ್ಪಾಡಾಗುತ್ತಿದೆ. ಸುತ್ತಲಿನ ಪ್ರದೇಶಗಳ ಜನರಿಗೆ ಇದರಿಂದ ಅನೇಕ ಸಮಸ್ಯೆಗಳಾಗುತ್ತಿದ್ದು, ಕುಡಿಯುವ ನೀರಿಗೂ ತ್ಯಾಜ್ಯಗಳು ಸೇರುತ್ತಿವೆ. ರಾಮನಾಥಪುರ ಹೋಬಳಿಯ ಕೇರಳಾಪುರದಲ್ಲಿನ ಕಾವೇರಿ ನದಿ ಡಂಡೆಯಲ್ಲಿ ಸಂಗ್ರಹ ಆಗುತ್ತಿರುವ ಕಸದ ರಾಶಿಯಿಂದ ಸುತ್ತಲಿನ ನಿವಾಸಿಗಳಿಗೆ ಕಸದ ಘಾಟು ವಾಸನೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ.ಕಸದಲ್ಲಿರುವ ಆಹಾರ ತಿನ್ನಲು ಬರುವ ನಾಯಿ, ಹಂದಿ ಮತ್ತು ಪಕ್ಷಿಗಳು ಈ ಸ್ಥಳವನ್ನು ಆವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದು ಕಸವನ್ನು ಮನಸೋಯಿಚ್ಚೆ ಎಳೆದಾಡಿ ಮನೆಯ ಬಳಿಯೂ ತಂದು ಬಿಡುತ್ತಿವೆ.ಕಸ ವಿಲೇವಾರಿಗೆ ಪ್ರತ್ಯೇಕ ಸ್ಥಳ ಗುರುತಿಸದೇ ಇದ್ದುದರಿಂದ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸಿದ ಕಸವನ್ನು ಕೆಲ ವರ್ಷಗಳಿಂದ ಇದೇ ಸ್ಥಳದಲ್ಲಿ ಹಾಕಲಾಗುತ್ತಿತ್ತು. ಕೆಲ ತಿಂಗಳಿಂದ ಸ್ಥಳ ಬದಲಿಸಿದ್ದರೂ, ಸ್ಥಳೀಯರು ಮಾತ್ರ ಇಲ್ಲಿಯೇ ಕಸ ಹಾಕುತ್ತಿದ್ದು, ನದಿ ಡಂಡೆಯಲ್ಲಿ ಕಸದ ರಾಶಿಯು ಹೆಚ್ಚುತ್ತಿದೆ. ನಿತ್ಯ ನದಿಗೆ ಬಟ್ಟೆ ತೊಳೆಯಲು ಹಾಗೂ ಶುಭಕಾರ್ಯಗಳಿಗೆ ಕಲಶ ತರಲು ಬರುವ ಜನರಿಗೆ ಕಸದ ದುರ್ವಾಸನೆ ಸಹಿಸಿಕೊಳ್ಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!