ಉದಯವಾಹಿನಿ, ಮಾಲೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮತ್ತು ಸರ್ವೇ ಸೂಪರ್ ವೈಸರ್ ಸುರೇಶ್ ಬಾಬು ಮನೆ ಮೇಲೆ ಎರಡನೇ ಬಾರಿ ಲೋಕಾಯುಕ್ತ ಎಸ್ಪಿ ಧನಂಜಯ್ ನೇತೃತ್ವದಲ್ಲಿ ದಾಳಿ ನಡೆಸಿ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳ ಹುಡುಕಾಟ ನಡೆಸಿದರು.ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಅವರ ನಿವಾಸ ಸೇರಿದಂತೆ ೭ ಕಡೆ ದಾಳಿ ನಡೆಸಿ ಅಕ್ರಮ ಆಸ್ತಿ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು ಕೋಲಾರದ ಹಾರೋಹಳ್ಳಿ ,ಧರ್ಮರಾಯನಗರ, ಕೋಟೆ ಮತ್ತು ಮಾಲೂರು ಅವರ ಸ್ವ ಗ್ರಾಮ ನಿಡಘಟ್ಟ ಹೊಸಕೋಟೆಯ ಗೆಸ್ಟ್ ಹೌಸ್ ಮೇಲೆಯು ದಾಳಿ, ನಡೆಸಿದರು.
ನಕಲಿ ದಾಖಲೆ ಸೃಷ್ಟಿ ಮತ್ತು ಸರ್ಕಾರಿ ದಾಖಲೆಗಳನ್ನು ಅನಧಿಕೃತ ಮನೆಯಲ್ಲಿ ಶೇಖರಣೆ ಆರೋಪದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ದಾಳಿ ಮಾಡಿ ಹಲವು ದಾಖಲೆಯನ್ನು ವಶಕ್ಕೆ ಪಡೆಯಲಾಗಿತ್ತು, ಎರಡನೇ ಬಾರಿ ನಡೆಸಿರುವ ದಾಳಿಯಲ್ಲಿ ಪಟ್ಟಣದ ಬೋವಿ ಹಾಸ್ಟೇಲ್ ಬಳಿಯ ಅವರ ನಿವಾಸ ಹಾಗೂ ಆದರ್ಶನಗರದ ಸುರೇಶ್ ಬಾಬು ಆಪ್ತ ಸರ್ವೆಯರ್ ನಾಗರಾಜು ಅವರ ಮನೆಯಲ್ಲಿ ನಿಡಘಟ್ಟ ಗ್ರಾಮದ ಅವರ ನಿವಾಸದಲ್ಲಿ ಸುರೇಶ್ ಬಾಬು ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ ಪಾಸ್ತಿಗಳ ದಾಖಲೆಗಳ ಹುಡುಕಾಟ ನಡೆಸಿದರು. ಕೆಲವು ದಾಖಲೆಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
