ಉದಯವಾಹಿನಿ, ಬೆಂಗಳೂರು: ಬೆಂಗಳೂರಿನ ಜನದಟ್ಟಣೆಯಿಂದ ಕೂಡಿರುವ ರೈಲ್ವೆ ಜಾಲವನ್ನು ಕಡಿಮೆ ಮಾಡಲು, ದೇವನಹಳ್ಳಿ ಬಳಿಯ ಪ್ರಸ್ತಾವಿತ ಮೆಗಾ ಕೋಚಿಂಗ್ ಟರ್ಮಿನಲ್‌ಗಾಗಿ ಅಂತಿಮ ಸ್ಥಳ ಸಮೀಕ್ಷೆ (FLS)ಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸುವ ವಿಶಾಲ ಉಪಕ್ರಮದ ಭಾಗವಾಗಿ ಈ ಅನುಮೋದನೆ ನೀಡಲಾಗಿದೆ. ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಕಾರಿಡಾರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಈ ಸಮೀಕ್ಷೆಗೆ 1.35 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ, ಐದನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಟ್ರೋ ನಗರವಾದ ಬೆಂಗಳೂರು, ಕೇವಲ ಮೂರು ಟರ್ಮಿನಲ್‌ಗಳು ಮತ್ತು 12 ಪಿಟ್ ಲೈನ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತದೆ. ಪ್ರತಿದಿನ 140 ಸ್ಟಾಟಿಂಗ್ ಪಾಯಿಂಟ್, 139 ಎಂಡಿಂಗ್ ಪಾಯಿಂಟ್ ಜೊತೆಗೆ 142 ಪಾಸ್-ಥ್ರೂ ರೈಲುಗಳನ್ನು ನಿರ್ವಹಿಸುತ್ತದೆ. ಇವತ್ತಿನ ಸ್ಥಿತಿಯಲ್ಲಿ 110 ಪ್ರಾಥಮಿಕ ನಿರ್ವಹಣಾ ರೈಲುಗಳು ಈ ಮೂಲಸೌಕರ್ಯವನ್ನು ಬಳಸುತ್ತಿದ್ದು, 2024–25ರ ವೇಳೆ 103.72 ಮಿಲಿಯನ್ ಪ್ರಯಾಣಿಕರ ಉಗಮದೊಂದಿಗೆ ಒಟ್ಟು 212.06 ಮಿಲಿಯನ್ ಪ್ರಯಾಣಿಕರ ಪಾದಚಾರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ದಿನಕ್ಕೆ 210 ರೈಲುಗಳವರೆಗೆ ಏರುವ ಸಾಧ್ಯತೆ ಇದೆ. ಇದು ಈಗಿರುವ ಟರ್ಮಿನಲ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಸಾಕಷ್ಟು ಸ್ಟೇಬಲಿಂಗ್ ಮಾರ್ಗಗಳು ಮತ್ತು ಮೀಸಲಾದ ಸರಕು ಕಾರಿಡಾರ್ ಇಲ್ಲದಿರುವುದು ಖಾಲಿ ರೇಕ್ ಗಳ ಅತಿಯಾದ
ಚಲನವಲನವಾಗುತ್ತಿದೆ. ಬೆಂಗಳೂರಿನಲ್ಲಿ ಜನದಟ್ಟನೆ ಬೃಹದಾಕಾರವಾಗಿ ಬೆಳೆಯುತ್ತಿರುವುದರಿಂದ ಅಸ್ತಿತ್ವದಲ್ಲಿರುವ ಟರ್ಮಿನಲ್‌ಗಳನ್ನು ವಿಸ್ತರಿಸುವುದು ಹೆಚ್ಚು ಕಷ್ಟಕರವಾಗಿದೆ. ಹೀಗಾಗಿ ದೇವನಹಳ್ಳಿಯಲ್ಲಿ ಅಥವಾ ಯಲಹಂಕ – ದೇವನಹಳ್ಳಿ – ಚಿಕ್ಕಬಳ್ಳಾಪುರ ಕಾರಿಡಾರ್‌ನ ಉದ್ದಕ್ಕೂ ಯಾವುದೇ ಸೂಕ್ತ ಸ್ಥಳದಲ್ಲಿ ಪ್ರಸ್ತಾವಿತ ಟರ್ಮಿನಲ್ ನಾಲ್ಕನೇ ಪ್ರಮುಖ ಟರ್ಮಿನಲ್ ಆಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು 12 ಪಿಟ್ ಲೈನ್‌ಗಳು, ಐದು ವಾಷಿಂಗ್ ಲೈನ್‌ಗಳು, 24 ಸ್ಟೇಬಲಿಂಗ್ ಲೈನ್ ಗಳು, ಆವರಣದೊಳಗಿನ ಆರು ದುರಸ್ತಿ ಲೈನ್‌ಗಳು, ಎರಡು ಪಿಟ್ ವೀಲ್ ಲೇತ್‌ಗಳು ಮತ್ತು ಆರು ಸಿಕ್ ಲೈನ್‌ಗಳ ಜೊತೆಗೆ ಲೋಕೋ ಬೇ, 50 ಟನ್ ಸಾಮರ್ಥ್ಯದ ಬೂಟ್ ಲಾಂಡ್ರಿ, ಆಡಳಿತ ಭವನಗಳು ಮತ್ತು ಮಳಿಗೆಗಳಂತಹ ಪೂರಕ ಸೌಲಭ್ಯಗಳು ಒಳಗೊಂಡಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!