ಉದಯವಾಹಿನಿ, ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಲಿದ್ದಾರೆ. ಅವರ ಭಾಷಣ ತೀವ್ರ ಕುತೂಹಲವನ್ನು ಉಂಟು ಮಾಡಿದೆ. ಉಭಯ ರಾಷ್ಟ್ರಗಳ ಡಿಜಿಎಂಓಗಳ ನಡುವೆ ಮಾತುಕತೆ ನಡೆಯುವ ಮನ್ನವೇ ಪ್ರಧಾನಿ ದೇಶವನ್ನುದ್ದೇಶಿ ರಾತ್ರಿ ಭಾಷಣ ಮಾಡಲಿದ್ದಾರೆ ಎಂಬ ವಿಚಾರ ಹೊರಬಿದ್ದಿದ್ದು, ಭಾರೀ ಸಂಚಲವನ್ನುಂಟು ಮಾಡಿದೆ.
ಪ್ರಧಾನಿ, ರಕ್ಷಣಾ ಸಚಿವರು, ಸೇನೆಯ ಉನ್ನತಾಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ ಯಶಸ್ವಿ ಆಪರೇಷನ್ ಸಿಂಧೂರದ ಬಗ್ಗೆ ಮಾಹಿತಿ ಪಡೆದು, ಮುಂದಿನ ಕಾರ್ಯಾಚರಣೆ ಕುರಿತ ಚರ್ಚೆ ಮಾಡಿದ್ದಾರೆ. ಈಗಾಗಲೇ ಆಫರೇಷನ್ ಸಿಂಧೂರ ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ನಡುವೆ ಪ್ರಧಾನಿ ಅವರು ಮಾಡಲಿರುವ ಭಾಷಣ ಭಾರೀ ಮಹತ್ವ ಪಡೆದುಕೊಳ್ಳಲಿದೆ.
ಎರಡೂ ದೇಶಗಳ ಡಿಜಿಎಂಓಗಳ ನಡುವಿನ ಸಭೆ ಸಂಜೆ 5 ಗಂಟೆಗೆ ಮುಂದೂಡಲಾಗಿತ್ತು. ಇದರ ಬೆನ್ನಲೆ ಪ್ರಧಾನಿ ಭಾಷಣ ಮಾಡಲಿರುವ ವಿಚಾರ ಹೊರಬಿದ್ದಿದ್ದು, ಇಡೀ ವಿಶ್ವದ ಗಮನ ಭಾರತದತ್ತ ಕೇಂದ್ರೀಕರಿಸಲು ಕಾರಣವಾಗಿದೆ. ಕಾಶ್ಮೀರದ ಪಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯ ನಂತರ ಪಾಕಿಸ್ತಾನ ಮತ್ತು ಭಾರತ ನಡುವಿನ ಬಿಕ್ಕಟ್ಟು ವಿಕೋಪಕ್ಕೆ ಹೋಗಿ ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು.
