ಉದಯವಾಹಿನಿ, ಕೆಜಿಎಫ್: ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸಾರ್ವಜನಿಕರ ಬಳಕೆಗಾಗಿ ನಿರ್ಮೀಸಿರುವ ಕಟ್ಟಡವು ಶ್ವಾನಗಳ ವಾಸ ಸ್ಥಾನವಾಗಿ ಮಾರ್ಪಟಿದೆ.ಎಲ್ಲಿ ಯಾವ ಕಟ್ಟಡ ಎಂದು ಕುತುಹಲವೇ ಕೇಳಿ ನಗರದ ಉರಿಗಾಂ ರೈಲ್ವೆ ನಿಲ್ದಾಣದಲ್ಲಿ ಟಿಕೇಟ್ ಕೌಂಟರ್ ಸೇರಿದಂತೆ ದೇಶದ ಹಲವು ಟಿಕೇಟ್ ಕೌಂಟರ್ ಗಳನ್ನು ಬಹಳ ವರ್ಷಗಳ ಹಿಂದಿನ ಕಾಲದಲ್ಲಿ ನಿರ್ಮೀಸಿದ್ದರಿಂದ ರೈಲ್ವೆ ನಿಲ್ದಾಣಗಳನ್ನು ಉನ್ನತಿಕರಿಸಲು ಹಾಗೂ ಆದುನಿಕ ಟಚ್ ನೀಡಲು ಕೇಂದ್ರ ಸರ್ಕಾರ ಕೋಟ್ಯಾಂತರ ಅನುದಾನವನ್ನು ಬಿಡುಗಡೆಗೊಳಿಸಿತ್ತು ಹಿಂದಿನ ಕೋಲಾರ ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾಲೂರು ಬಂಗಾರಪೇಟೆ ಕೆಜಿಎಫ್ ಉರಿಗಾಂ ರೈಲ್ವೆ ನಿಲ್ದಾಣಗಳನ್ನು ಉನ್ನತಿಕರಿಸಲು ೨೦ ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಗೊಂಡಿದ್ದರು ಮತ್ತು ಕಾಮಗಾರಿ ಭೂಮಿ ಪೂಜೆಯನ್ನು ಅದ್ದೂರಿಯಾಗಿ ನೆರೆವೆರಿಸಿದ್ದರು
ಕಟ್ಟಡ ಸಹ ಪೂರ್ಣಗೊಂಡಿತ್ತು ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಕಟ್ಟಡದ ಉದ್ಘಾಟನೆ ಭಾಗ್ಯ ಮುನಿಸ್ವಾಮಿಗೆ ದೊರಕಲಿಲ್ಲ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯೆ ಮೈತ್ರಿಯಿಂದ ಬಿಜೆಪಿ ಕೋಲಾರ ಲೋಕಸಭಾ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು ಈ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲೇಶಬಾಬು ಚುನಾಯಿತರಾದರು ಆದರೆ ಸಂಸದರಾಗಿ ಆಯ್ಕೆಯಾಗಿ ಒಂದು ವರ್ಷ ಪೂರ್ಣಗೊಂಡರು ಇದುವರೆಗೂ ಕಟ್ಟಡವನ್ನು ಪ್ರಯಾಣಿಕರ ಬಳಕೆಗಾಗಿ ಕಾರ್ಪಣೆಗೊಳಿಸುವಲ್ಲಿ ಮುಂದಾಗದಿರುವುದು ಪ್ರಯಾಣಿಕರು ಹಾಗೂ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ ಮತ್ತು ಕಟ್ಟಡವನ್ನು ಶ್ವಾನಗಳ ಬಳಕೆಗೆ ಹಾಗೂ ಇತರೆ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!