ಉದಯವಾಹಿನಿ,ನವದೆಹಲಿ: ದೆಹಲಿಯ ಅಶೋಕ್ ವಿಹಾರ್‌ನಲ್ಲಿರುವ ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರ ನಿವಾಸದಲ್ಲಿ ಶನಿವಾರ ಕಳ್ಳತನ ನಡೆದಿದೆ. ಕಳ್ಳತನದ ನಂತರ ಎರಡು ಬೆಳ್ಳಿಯ ಗಣೇಶನ ವಿಗ್ರಹಗಳು, ಸಾಯಿಬಾಬಾನ ಒಂದು ವಿಗ್ರಹ ಮತ್ತು ವಿದ್ಯುತ್ ನೀರಿನ ಮೋಟಾರ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಮಾಹಿತಿ ಪಡೆದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ನಾಯಕ್ ಅವರು ಇತ್ತೀಚೆಗಷ್ಟೇ ಅಶೋಕ್ ವಿಹಾರಕ್ಕೆ ಸ್ಥಳಾಂತರಗೊಂಡಿರುವುದು ಗಮನಾರ್ಹ. ಮೊದಲು ಅವರು ಕೇಶವ ಪುರಂನಲ್ಲಿ ವಾಸವಿದ್ದರು. ನಾಯಕ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸದ್ಯ, ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದಾರೆ.
