ಉದಯವಾಹಿನಿ, ನವದೆಹಲಿ: ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಗೆ ಆನೆ ಬಲ ಸಿಕ್ಕಿದ್ದು, ಸ್ವದೇಶಿ ನಿರ್ಮಿತ ‘ಅಗ್ಗದ ಐರನ್ ಡೋಮ್’ ಎಂದೇ ಖ್ಯಾತಿ ಪಡೆಯುತ್ತಿರುವ ಭಾರ್ಗವಾಸ್ತ್ರ (Bhargavastra) ಪರೀಕ್ಷೆ ಯಶಸ್ವಿಯಾಗಿದೆ.ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ಆರಂಭವಾಗಿತ್ತು.
ಈ ಹಂತದಲ್ಲಿ ಪಾಕಿಸ್ತಾನ ಸೇನೆ ಭಾರತದ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು. ತಾನು ಟರ್ಕಿ ಮತ್ತು ಚೀನಾ ದೇಶಗಳಿಂದ ಪಡೆದ ಅತ್ಯಾಧುನಿಕ ಡ್ರೋನ್ ಗಳನ್ನೂ ಕೂಡ ಪಾಕಿಸ್ತಾನ ಭಾರತದ ಮೇಲಿನ ದಾಳಿಗೆ ಕಳುಹಿಸಿತ್ತು. ಈ ದಾಳಿಗಳೆಲ್ಲವನ್ನೂ ಭಾರತ ತನ್ನ ಏರ್ ಡಿಫೆನ್ಸ್ ಸಿಸ್ಟಮ್ ನಿಂದ ಯಶಸ್ವಿಯಾಗಿ ಹೊಡೆದುರುಳಿಸಿತ್ತು.
ಆದರೆ ಡ್ರೋನ್ ನಂತಹ ಸಣ್ಣ ಸಣ್ಣ ವಸ್ತುಗಳಿಗೂ ಭಾರತದ ದುಬಾರಿ ಏರ್ ಡಿಫೆನ್ಸ್ ಬಳಕೆ ಮಾಡಲಾಗುತ್ತಿತ್ತು. ಆದರೆ ಈ ಸಮಸ್ಯೆಗೆ ಇದೀಗ ಸ್ವದೇಶಿ ನಿರ್ಮಿತ ‘ಅಗ್ಗದ ಐರನ್ ಡೋಮ್’ ಖ್ಯಾತಿಯ ‘ಭಾರ್ಗವಾಸ್ತ್ರ’ ಪರಿಹಾರ ನೀಡಿದೆ.

ಭಾರತದ ರಕ್ಷಣಾ ಪಡೆಗೆ ರಣಭಯಂಕರ ಅಸ್ತ್ರ ಅಂದರೆ Counter Drone System ಸೇರ್ಪಡೆಯಾಗಿದ್ದು, ಇನ್ಮುಂದೆ ವಿರೋಧಿಗಳ ಡ್ರೋನ್‌ ಹಿಂಡುಗಳನ್ನು ಮಟ್ಟ ಹಾಕಲು ಭಾರತೀಯ ಸೇನೆಗೆ ಆನೆಬಲ ಬಂದಿದೆ. ಭಾರ್ಗವಸ್ತ್ರ (Bhargavastra) ಎಂಬ ಹೆಸರಿನ ಈ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ಸಿಸ್ಟಮ್ ನ ಪ್ರಯೋಗ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!