ಉದಯವಾಹಿನಿ, ಮಂಗಳೂರು: ಹವಾಮಾನ ಇಲಾಖೆಯು ಮೇ ಕೊನೆಯ ವಾರದಲ್ಲಿ ಮುಂಗಾರು ಆರಂಭವಾಗುವ ಸೂಚನೆ ನೀಡಿದೆ. ಮುಂಗಾರಿನ ಸಂಭಾವ್ಯ ಅನಾಹುತಗಳನ್ನು ಎದುರಿಸಲು ಮೆಸ್ಕಾಂ ಸಿದ್ಧತೆ ನಡೆಸುತ್ತಿದೆ.
ತುರ್ತು ನಿರ್ವಹಣೆ, ಅಗತ್ಯ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಈ ನಾಲ್ಕು ಜಿಲ್ಲೆಗಳ 14 ವಿಭಾಗಗಳಲ್ಲಿ ಒಟ್ಟು 489 ಮಂದಿಯ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ.
ಒಟ್ಟು 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಅತ್ತಾವರ, ಕಾವೂರು, ಪುತ್ತೂರು, ಬಂಟ್ವಾಳ ಸೇರಿ 146 ಮಂದಿಯ ಕಾರ್ಯಪಡೆ ರಚಿಸಲಾಗಿದ್ದು, 29
ವಾಹನಗಳನ್ನು ಅಣಿಯಾಗಿ ಇಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ -55 ಮಂದಿಯ ಕಾರ್ಯಪಡೆ ಮತ್ತು 5 ವಾಹನಗಳು, ಕಾರ್ಕಳ- 24 ಮಂದಿಯ ಕಾರ್ಯಪಡೆ ಮತ್ತು 4 ವಾಹನಗಳು, ಕುಂದಾಪುರ- 48 ಮಂದಿಯ ಕಾರ್ಯಪಡೆ ಸಜ್ಜುಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ- 33 ಮಂದಿಯ ಕಾರ್ಯಪಡೆ ಮತ್ತು ಒಂದು ವಾಹನ, ಶಿಕಾರಿಪುರ- 24 ಮಂದಿಯ ಕಾರ್ಯಪಡೆ ಮತ್ತು 3 ವಾಹನ, ಭದ್ರಾವತಿ 10 ಮಂದಿಯ ಕಾರ್ಯಪಡೆ, ಸಾಗರ- 34 ಮಂದಿಯ ಕಾರ್ಯಪಡೆ ಮತ್ತು 6 ವಾಹನ ಅಣಿಗೊಳಿಸಲಾಗಿದೆ.
