ಉದಯವಾಹಿನಿ, ಕಾರವಾರ: ಕರ್ನಾಟಕದ ಕಾರವಾರ ಬಂದರಿಗೆ ಬಂದ ಎಂಟಿ ಆರ್‌ ಓಷನ್‌ ಎಂಬ ಸರಕು ಸಾಗಣೆ ಹಡಗಿನಲ್ಲಿ ಆಗಮಿಸಿದ ಪಾಕಿಸ್ತಾನಿ ಪ್ರಜೆಯೊಬ್ಬರಿಗೆ ಬಂದರು ಅಧಿಕಾರಿಗಳು ಭಾರತ ಪ್ರವೇಶ ನಿರಾಕರಿಸಿದ್ದಾರೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.ಇರಾಕ್‌ನಿಂದ ಬಿಟುಮೆನ್‌ ಸಾಗಿಸುತ್ತಿದ್ದ ಹಡಗನ್ನು ಮೇ 12 ರಂದು 14 ಭಾರತೀಯ ಸಿಬ್ಬಂದಿ, ಇಬ್ಬರು ಸಿರಿಯನ್ನರು ಮತ್ತು ಒಬ್ಬ ಪಾಕಿಸ್ತಾನಿ ಪ್ರಜೆಯೊಂದಿಗೆ ಕಾರವಾರಕ್ಕೆ ಬಂದಿತ್ತು. ಹಡಗಿನ ಕ್ಯಾಪ್ಟನ್‌ ಕೂಡ ಭಾರತೀಯರಾಗಿದ್ದರು. ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧಗಳು ಹದಗೆಡುತ್ತಿರುವ ಕಾರಣ ಪಾಕಿಸ್ತಾನಿ ಮತ್ತು ಸಿರಿಯನ್‌ ಪ್ರಜೆಗಳು ಹಡಗಿನಿಂದ ಇಳಿಯಬಾರದು ಎಂದು ಪೊಲೀಸ್‌‍ ಇನ್‌್ಸಪೆಕ್ಟರ್‌ ನಿಶ್ಚಲ್‌ ಕುಮಾರ್‌ ಸೂಚನೆ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರ ಸೂಚನೆಯಂತೆ, ಅವರ ಮೊಬೈಲ್‌ ಫೋನ್‌ಗಳನ್ನು ಕ್ಯಾಪ್ಟನ್‌ ವಶಪಡಿಸಿಕೊಂಡರು. ಇರಾಕಿ ವಾಣಿಜ್ಯ ಹಡಗು ಬಂದರಿನಲ್ಲಿ ಬಿಟುಮೆನ್‌ ಇಳಿಸಿದ ನಂತರ ಇರಾಕ್‌ಗೆ ಹೊರಟಿತು ಎಂದು ಕಾರವಾರ ಬಂದರು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!