ಉದಯವಾಹಿನಿ, ಕಲಬುರಗಿ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ತ್ಯಾಜ್ಯ (ಮೂಳೆ ಇತ್ಯಾದಿ) ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಸುಶೀಲಕುಮಾರ, ಸಿಬ್ಬಂದಿಗಳಾದ ಈರಣ್ಣ, ಜೈಭೀಮ ಅವರು ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ರಿಂದ 3 ಟನ್ ಜಾನುವಾರು ತ್ಯಾಜ್ಯ ಜಪ್ತಿ ಮಾಡಿದ್ದಾರೆ.
ಗರಿಬ್ ನವಾಜ್ ಕಾಲೋನಿಯ ತೌಫಿಕ್ ತಂದೆ ಯುಸೂಫ್ ಅಲಿ (31) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ನೂರಾನಿ ಮಹೋಲ್ಲಾದಲ್ಲಿರುವ ಜಬ್ಬಾರ್ ಖುರೇಶಿ ಅವರ ಖುಲ್ಲಾ ಪ್ಲಾಟ್‍ನಲ್ಲಿರುವ ಜಾನುವಾರುಗಳ ತ್ಯಾಜ್ಯವನ್ನು ತುಂಬಿಕೊಂಡು ಯಾದಗಿರಿ ಜಿಲ್ಲೆಯ ಕಂಪನಿಗೆ ಸಾಗಾಣಿಕೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
