ಉದಯವಾಹಿನಿ,ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಬಬಿತಾ ಪೋಗಟ್ ಅವರು ಸಾಕ್ಷಿ ಮಲಿಕ್ ಮತ್ತು ಆಕೆಯ ಪತಿ ಸತ್ಯವರ್ತ್ ಕಾಡಿಯಾನನ್ ಇಬ್ಬರೂ ಕಾಂಗ್ರೆಸ್‌ನ ಕೈಗೊಂಬೆಗಳು ಎಂದು ಟೀಕಿಸಿದ್ದಾರೆ. ತಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ. ಕುಸ್ತಿಪಟುಗಳು ಈ ಮುಂಚೆ ಒಗ್ಗಟ್ಟಾಗಿರಿದ ಕಾರಣ, ಕಿರುಕುಳ ಅನುಭವಿಸುತ್ತಿದ್ದರೂ ಇಷ್ಟು ವರ್ಷ ಬಾಯಿ ಮುಚ್ಚಿಕೊಂಡಿರಬೇಕಾಗಿತ್ತು ಎಂದು ಸಾಕ್ಷಿ ಮಲಿಕ್ ಹಾಗೂ ಅವರ ಪತಿ ಶನಿವಾರ ಹೇಳಿದ್ದರು. “ನಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ. ನಾವು ಜನವರಿಯಲ್ಲಿ ಜಂತರ್ ಮಂತರ್‌ಗೆ ಬಂದಿದ್ದೆವು.
ಬಿಜೆಪಿಯ ಇಬ್ಬರು ನಾಯಕರೇ ಪೊಲೀಸರಿಂದ ಅನುಮತಿ ಕೋರಿದ್ದರು ಎಂದು ಬಿಜೆಪಿ ಜತೆ ಗುರುತಿಸಿಕೊಂಡಿರುವ ಮಾಜಿ ಕುಸ್ತಿಪಟು ಬಬಿತಾ ಪೋಗಟ್ ಮತ್ತು ತೀರತ್ ರಾಣಾ ಅವರು ಬರೆದ ಪತ್ರವನ್ನು ತೋರಿಸಿದ್ದಾರೆ. “ಈ ಪ್ರತಿಭಟನೆ ಕಾಂಗ್ರೆಸ್ ಬೆಂಬಲಿತವಲ್ಲ. ಕಳೆದ 10- 12 ವರ್ಷಗಳಿಂದ ಇದು ನಡೆಯುತ್ತಿದೆ ಎಂಬುದು ಕುಸ್ತಿ ವಲಯದಲ್ಲಿನ ಶೇ 90ರಷ್ಟು ಜನರಿಗೆ ತಿಳಿದಿದೆ. ಕೆಲವು ಜನರು ಧ್ವನಿ ಎತ್ತಲು ಬಯಸಿದ್ದರು. ಆದರೆ ಕುಸ್ತಿ ವಲಯ ಒಗ್ಗಟ್ಟಾಗಿರಲಿಲ್ಲ” ಎಂದು ಸತ್ಯವರ್ತ್ ಹೇಳಿದ್ದಾರೆ.
