ಉದಯವಾಹಿನಿ, ಬೆಂಗಳೂರು: ಡಿ.ಕೆ ಶಿವಕುಮಾರ್ ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್, ಆರ್‌ಸಿಬಿ ಅಭಿಮಾನಿಗಳ ಸಾವಿನ ಸುದ್ದಿ ತಿಳಿದ ಮೇಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್‌ಗೆ ಮುತ್ತು ಕೊಟ್ಟು ಸಾವಿನಲ್ಲೂ ಸಂಭ್ರಮ ಮಾಡ್ತಾರೆ ಎಂದು ಡಿಕೆಶಿ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಖುದ್ದು ಪೊಲೀಸರೇ ಎರಡೆರಡು ಕಡೆ ಕಾರ್ಯಕ್ರಮ ಬೇಡ ಅಂದರು ಸಿಎಂ ಮತ್ತು ಡಿಸಿಎಂ ಕ್ರೆಡಿಟ್ ಪಡೆಯೋಕೆ ಈ ಕಾರ್ಯಕ್ರಮ ಮಾಡಿ ಅನಾಹುತಕ್ಕೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾವಿನ ವಿಷಯ ನನಗೆ ಗೊತ್ತಿರಲಿಲ್ಲ, ಅಲ್ಲಿ ನೆಟ್ವರ್ಕ್ ಇರ್ಲಿಲ್ಲ, ನಾನು ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡೆ ಅಂತ ಹೇಳಿದ್ರು, ಅಲ್ಲಿ ಜಾಮಾರ್ ಹಾಕಿದ್ರೆ ವಿಷಯವನ್ನ ನೀವು ಹೇಗೆ ತಿಳಿದುಕೊಂಡ್ರಿ? ಇದಕ್ಕೆ ಡಿಸಿಎಂ ಅವರೇ ಉತ್ತರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
