ಉದಯವಾಹಿನಿ, ನವದೆಹಲಿ: ಭಾರತ ಸರ್ಕಾರ ಭಾರತದಲ್ಲಿ ಹೊಸ ಟೋಲ್ ನೀತಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೊಸ ನೀತಿಯಲ್ಲಿ ಪ್ರಯಾಣಿಕರು ತಾವು ಪ್ರಯಾಣಿಸಿದ ನಿಖರವಾದ ಕಿಲೋಮೀಟರ್ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ಪಾವತಿಸಬಹುದು. ಈ ಬದಲಾವಣೆಯಿಂದ ಟೋಲ್ ಸಂಗ್ರಹಣೆ ಹೆಚ್ಚು ಪಾರದರ್ಶಕವಾಗಲಿದೆ.
ಹೊಸನೀತಿಯ ವಿಶೇಷತೆ ಏನು?’ ಕಿಲೋಮೀಟರ್ ಆಧಾರಿತ ಶುಲ್ಕ: ಹೊಸ ವ್ಯವಸ್ಥೆಯಡಿ, ಪ್ರಯಾಣಿಕರು ತಾವು ಹೆದ್ದಾರಿಯಲ್ಲಿ ಪ್ರಯಾಣಿಸಿದ ನಿಖರ ಕಿಲೋಮೀಟರ್‌ಗೆ ಅನುಗುಣವಾಗಿ ಟೋಲ್ ಶುಲ್ಕವನ್ನು ಪಾವತಿಸಬಹುದು. ಇದು ಸ್ಥಿರ ಟೋಲ್ ಶುಲ್ಕದ ಪ್ರಸ್ತುತ ವಿಧಾನವನ್ನು ಬದಲಾಯಿಸುತ್ತದೆ. ಸ್ಥಿರ ಟೋಲ್‌ನಲ್ಲಿ ದೂರವನ್ನು ಲೆಕ್ಕಿಸದೆ ಒಂದೇ ಶುಲ್ಕವನ್ನು ವಿಧಿಸಲಾಗುತ್ತದೆ. ಈ ವ್ಯವಸ್ಥೆ ಈಗ ಬದಲಾಗಲಿದೆ.
