ಉದಯವಾಹಿನಿ, ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ನಾನು ನನ್ನ ಪ್ರೀತಿಯನ್ನು ಕಳೆದುಕೊಂಡೆ ಎಂದು ಯುವಕನೊಬ್ಬ ಅಹಮದಾಬಾದ್ ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದಾನೆ.
ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ನಾನು ನನ್ನ ಪ್ರೀತಿಯನ್ನು ಕಳೆದುಕೊಂಡೆ ಎಂದು ಯುವಕನೊಬ್ಬ ಅಹಮದಾಬಾದ್ ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದಾನೆ.
ಆಸ್ಪತ್ರೆಯ ವೇಯ್ಟಿಂಗ್ ರೂಮ್‍ನಲ್ಲಿ ಯುವಕ ಒಬ್ಬನೇ ಕುಳಿತು ಕಣ್ಣೀರು ಹಾಕುತ್ತಿದ್ದ. ಹಳೆಯ ನೆನಪುಗಳನ್ನು ಮೆಲುಕು ಹಾಕ್ತಾ, ಅಳುತ್ತಲೇ ಇದ್ದ. ಅಲ್ಲೇ ಇದ್ದ ಕೆಲವರು, ಆತನಿಗೆ ಯಾರಿಗಾಗಿ ಕಾಯುತ್ತಿರುವೆ…? ಯಾರು ಮೃತಪಟ್ಟಿದ್ದಾರೆ ಎಂದು ಕೇಳಿದ್ದಾರೆ.
ಈ ವೇಳೆ ಯುವಕ ಉತ್ತರಿಸಿದ್ದು ಒಂದೇ ಒಂದು ಪದ! `ನನ್ನ ಪ್ರೀತಿ’ ಎಂದು ಮತ್ತೆ ಬಿಕ್ಕಳಿಸಿ ಅತ್ತಿದ್ದಾನೆ. ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈನಿಂದ ಯುವಕ ಬಂದಿದ್ದ. ಆತ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತ ಮೃತದೇಹಕ್ಕಾಗಿ ಕಾಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
