ಉದಯವಾಹಿನಿ, ಮಂಗಳೂರು: ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಡೆದಿದೆ. ಕುತ್ತಾರು ನಿವಾಸಿ ಹಾಗೂ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ವೈದ್ಯ ಡಾ.ಮುಮ್ತಾಝ್ ಅಹಮ್ಮದ್ ದಂಪತಿಯ ಮಗಳು ಹಿಬಾ ಐಮನ್ (15) ಮೃತ ದುರ್ದೈವಿ. ಕುತ್ತಾರಿನಲ್ಲಿರುವ 18 ಮಹಡಿಯ ಸಿಲಿಕೋನಿಯಾ ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಹಿಬಾ ಐಮನ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ. ಮಹಡಿಯಲ್ಲಿ ಬಟ್ಟೆ ಒಣ ಹಾಕುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
