ಉದಯವಾಹಿನಿ, ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ಬ್ರಿಟಿಷ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಜೀವ ಉಳಿಸಿಕೊಂಡ ಅವರು, ಸೀಟ್ ಬೆಲ್ಟ್ ತೆಗೆದು ಎಮರ್ಜೆನ್ಸಿ ಬಾಲಿಗಿಲಿಂದ ಜಿಗಿದೆ ಎಂದು ದುರಂತದಿಂದ ಪಾರಾದ ಕ್ಷಣಗಳನ್ನು ವಿವರಿಸಿದ್ದಾರೆ.ಅಹಮದಾಬಾದ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಮಾಧ್ಯಮಗಳೊಂದಿಗೆ ಘಟನೆಯಿಂದ ಪಾರಾದ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಿ ಮೋದಿಯವರು ಘಟನೆ ಹೇಗೆ ಆಯ್ತು ಎಂದು ಕೇಳಿದರು. ನಾನು ಎಲ್ಲವನ್ನು ವಿವರಿಸಿದ್ದೇನೆ ಎಂದಿದ್ದಾರೆ.
ನನ್ನ ಕಣ್ಣ ಮುಂದೆಯೇ ಎಲ್ಲಾ ನಡೆದು ಹೋಯಿತು. ನಾನು ಬದುಕಿ ಬಂದಿರೋದು ಹೇಗೆ ಎಂದೇ ನನಗೆ ನಂಬಲು ಆಗ್ತಿಲ್ಲ. ಅಲ್ಲಿ ಕೆಲ ಕ್ಷಣ ನಾನು ಸತ್ತೇ ಹೋಗಿದ್ದೇನೆ ಎಂದು ಅನ್ನಿಸಿತ್ತು. ಆದರೆ ಕಣ್ಣು ಬಿಟ್ಟಾಗ ನಾನು ಬದುಕಿದ್ದೇನೆ ಎಂದು ಗೊತ್ತಾಯ್ತು ಎಂದು ಕರಾಳ ಕ್ಷಣವನ್ನು ಮೆಲುಕು ಹಾಕಿದ್ದಾರೆ.
