ಉದಯವಾಹಿನಿ,ಯಾದಗಿರಿ: ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಯಾದಗಿರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆರೋಗ್ಯ ಆವಿಷ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ, ನಮ್ಮ ನಿಲುವುಗಳಿಗೆ, ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ.
ಇಂತಹ ಘಟನೆ ನಡೆಯಬಾರದು, ದುರಂತಗಳು ಎಲ್ಲೂ ಸಂಭವಿಸಬಾರದು. ಯಾವುದೇ ಸರ್ಕಾರದಲ್ಲಿ ಆಗಬಾರದು ಎಂದಿದ್ದಾರೆ. ದುರಂತಗಳು ನಡೆದು ಬಡವರು ಸಾಯಬಾರದು. ಆದರೆ ಒಂದೊಂದು ಸಾರಿ ನಾವು ತಪ್ಪು ಮಾಡದೇ ಹೋದ್ರು, ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
