
ಉದಯವಾಹಿನಿ, ಅಕ್ಷಯ್ ಕುಮಾರ್ ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಬಾಲಿವುಡ್ ಹಲವು ತಾರೆಯರನ್ನೊಳಗೊಂಡ ʻಹೌಸ್‌ಫುಲ್-5ʼ (5) ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಜೂನ್ 6ರಂದು ತೆರೆ ಕಂಡ ಈ ಚಿತ್ರ 8 ದಿನಗಳಲ್ಲೇ ನೂರು ಕೋಟಿಯ ಕ್ಲಬ್ ಸೇರಿದೆ.
ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶಮುಖ್ (Riteish Deshmukh) ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಜೂನ್ 6ರಂದು ತೆರೆ ಕಂಡಿತ್ತು. ಮೊದಲ ದಿನವೇ 24 ಕೋಟಿ ಗಳಿಕೆಯೊಂದಿಗೆ ಕುಂಟುತ್ತಾ ಸಾಗಿರುವ ʻಹೌಸ್‌ಫುಲ್ 5ʼ ಚಿತ್ರ ಕೊನೆಗೂ ನೂರು ಕೋಟಿ ಕ್ಲಬ್ ಸೇರಿದೆ. 8ನೇ ದಿನ 6 ಕೋಟಿ ಗಳಿಕೆಯೊಂದಿಗೆ ವಿಶ್ವಾದ್ಯಂತ ಒಟ್ಟು 200 ಕೋಟಿ ರೂ. ಗಳಿಸಿದೆ.
8ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ: ಈ ಹಿಂದೆ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದ್ರೆ.. ಹಣೆಬರಹಕ್ಕೆ ಹೊಣೆ ಯಾರು? ಅನ್ನುವಂತೆ ಕೆಲ ವರ್ಷಗಳಿಂದ ಅದೃಷ್ಟ ಕೈ ಕೊಟ್ಟಿದೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದ್ರೂ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.
