ಉದಯವಾಹಿನಿ, ಬೆಂಗಳೂರು: ಸಾವಿನಲ್ಲೂ ವಿಪಕ್ಷಗಳು ರಾಜಕೀಯ ಮಾಡೋದು ಬಿಡಬೇಕು ಎಂದು ಬಿಜೆಪಿ, ಜೆಡಿಎಸ್ ನಾಯಕರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ಚಿನ್ನಸ್ವಾಮಿ ಕಾಲ್ತುಳಿತ ಘಟನೆ ಖಂಡಿಸಿ, ಮಂಗಳವಾರ ಬಿಜೆಪಿ ಪ್ರತಿಭಟನೆ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಅವರು, ಚಿನ್ನಸ್ವಾಮಿ ಘಟನೆ ಬಗ್ಗೆ ದುಃಖ ಇದೆ. ಈ ಪ್ರಕರಣವು ಇಡೀ ಸರ್ಕಾರಕ್ಕೆ ನೋವು ತಂದಿದೆ. ಎಲ್ಲಿ ತಪ್ಪಾಗಿದೆ ಅಂತ ಕ್ರಮ ಆಗಿದೆ. 25 ಲಕ್ಷ ಪರಿಹಾರ ಕೊಡಲಾಗಿದೆ ಎಂದಿದ್ದಾರೆ.
ಏನೇ ಫೆಲ್ಯೂರ್ ಆದ್ರೂ ಸರ್ಕಾರದ ಜವಾಬ್ದಾರಿ ಆಗುತ್ತದೆ. ಅಹಮದಾಬಾದ್ ವಿಮಾನ ಅಪಘಾತಕ್ಕೆ ಯಾರು ಜವಾಬ್ದಾರಿ ತೆಗೆದುಕೊಳ್ತಾರೆ. ಉತ್ತರಪ್ರದೇಶದ ಕುಂಭಮೇಳದಲ್ಲಿ ಸಾವಾಗಿದಕ್ಕೆ ಯಾರು ಜವಾಬ್ದಾರಿ ತೆಗೆದುಕೊಂಡಿದ್ರು. ನಾವು ಅಭಿವೃದ್ಧಿ ಕೆಲಸ ಮಾಡ್ತಿದ್ದೇವೆ. ಬಿಜೆಪಿ ಅವರಿಗೆ ಏನು ಇಲ್ಲ. ಅದಕ್ಕೆ ಪ್ರತಿಭಟನೆ ಮಾಡ್ತಾರೆ. ಅವರು ಪ್ರತಿಭಟನೆ ಮಾಡಲಿ ಎಂದು ಹೇಳಿದ್ದಾರೆ.
