ಉದಯವಾಹಿನಿ, ಕೆ.ಆರ್.ಪುರ: ಮುಂದಿನ ಅವಧಿಗೆ ಕಸಾಪ ಮಹದೇವಪುರ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಉಪೇಂದ್ರ ಕುಮಾರ್ ಅರ್ಹ ಮತ್ತು ಸೂಕ್ತ ಎಂದು ಸಾಹಿತಿ ಹಾಗೂ ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟಿನ ಅಧ್ಯಕ್ಷರಾದ ಡಾ. ಎಸ್.‌ರಾಮಲಿಂಗೆಶ್ವರ (ಸಿಸಿರಾ ) ತಿಳಿಸಿದರು. ‌
ಮಹದೇವಪುರ ಕ್ಷೇತ್ರದ ಗುಂಡೂರು ಶಾಲಾ ಆವರಣದಲ್ಲಿ ಮಿಡಿತ ಫೌಂಡೇಶನ್ ಹಮ್ಮಿಕೊಂಡಿದ್ದ ಸಸಿ ನೆಡುವ, ನ್ಯೂಸ್ ಪೇಪರ್ ಕಿರು ಚಿತ್ರ ಪೋಸ್ಟರ್ ಬಿಡುಗಡೆ ಹಾಗೂ ದೊಡ್ಡಸ್ತಿಕೆ ಕವನ ಸಂಕಲನ ಮುಖಪುಟ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.‌
ಕನ್ನಡ ನಾಡು ಮತ್ತು ನುಡಿ ಅಭಿಮಾನ ತುಂಬುವ ಕೆಲಸಗಳನ್ನು ನಿತ್ಯ ನಿರಂತರ ಮಾಡುವ ಮೂಲಕ ಚಿರಪರಿಚಿತರಾಗಿರುವ ಉಪೇಂದ್ರಕುಮಾರ್ ಅವರಿಗೆ ಮುಂದಿನ ಅವಧಿಯಲ್ಲಿ ಮಹದೇವಪುರ ಕ್ಷೇತ್ರದ ಕಸಾಪ ಅಧ್ಯಕ್ಷರಾಗಿ ನೇಮಕ ಮಾಡಿದರೆ ಸೂಕ್ತ ಎಂದರು.
ಸಾಮಾಜಿಕ ಜವಾಬ್ದಾರಿಯೊಂದಿಗೆ ಪತ್ರಕರ್ತರು ವ್ಯವಹಾರಿಸಬೇಕಾಗಿದೆ, ಪತ್ರಕಾ ವಿತ್ತರಕರು ಹಾಗೂ ಪತ್ರಕರ್ತರು ನಿತ್ಯ ಜೀವನದ ಬಗ್ಗೆ ಅರಿವು ಮೂಡಿಸುವ ಕಿರುಚಿತ್ರವನ್ನು ಪತ್ರಕರ್ತರ ದಿನದೊಂದು ಬಿಡುಗಡೆ ಮಾಡಲಾಗುವುದು ಎಂದು ಪತ್ರಕರ್ತ ಹಾಗೂ ಪರಿಸರವಾದಿ ಪರಿಸರ ಮಂಜು ತಿಳಿಸಿದರು. ‌ ಈ ವೇಳೆ ಸಾಹಿತಿ ಉಪೇಂದ್ರ ಕುಮಾರ್ ಅವರಿಗೆ ಫೌಂಡೇಶನ್ ವತಿಯಿಂದ ಕನ್ನಡ ಕಾಯಕ ಜೀವಿ ಪ್ರಶಸ್ತಿ ಪ್ರಧಾನ ನೀಡಿ ಅಭಿನಂದಿಸಲಾಯಿತು. ಕನ್ನಡ ಜನಪದ ಪರಿಷತ್ ಬೆಂ. ಕಾರ್ಯಾಧ್ಯಕ್ಷ ಡಾ. ಅಜಿತ್ ಕುಮಾರ್, ಕಸಾಪ ಕ್ಷೇತ್ರಾಧ್ಯಕ್ಷ ಟಿ. ವೀರಭದ್ರಪ್ಪ, ಸಾಹಿತಿ ವಾದಿರಾಜ್, ಫೌಂಡೇಶನ್ ನ ಉಪಾಧ್ಯಕ್ಷರಾದ ಸೌಮ್ಯ ಪವಾರ್, ಪೃಕೃತಿ ಸಂತೋಷ್ ಸೇರಿದಂತೆ ತೇಗರಾಜ ಕೆ.ಬಿ ಕೊಳ್ಳಂಗಿ, ಕನ್ನಡ ಭಕ್ತ ಕಿರಣ್, ಕಿರಣ್ ಯಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!