ಉದಯವಾಹಿನಿ, ಚಿತ್ರದುರ್ಗ: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಸೇರಿದಂತೆ ಜಿಲ್ಲೆಯ ವಿವಿಧ ಯೋಗ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಂದು ಚಿತ್ರದುರ್ಗ ನಗರದ ಪ್ರಮುಖ ಬೀದಿಗಳಲ್ಲಿ ಯೋಗ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಅವರು ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶ್ರೀ ರಂಗಸ್ವಾಮಿ ಅವರು ಹಸಿರು ನಿಶಾನೆ ತೋರುವುದರೊಂದಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಯುತ ಕುಮಾರಸ್ವಾಮಿ ಅವರು ಯೋಗ ಭಾರತ ದೇಶದ ಹೆಮ್ಮೆಯ ಕೊಡುಗೆ.
ಇದು ಜಗತ್ತಿನಾದ್ಯಂತ ಪಸರಿಸುತ್ತಿರುವುದು ಹರ್ಷದಾಯಕವಾದ ವಿಚಾರ. ಸಾರ್ವಜನಿಕರಿಗೆ ಯೋಗವನ್ನು ತಲುಪಿಸುವ ಸಂಘ ಸಂಸ್ಥೆಗಳ ಆಸಕ್ತಿ ನಿಜಕ್ಕೂ ಶ್ಲಾಘನೀಯ ಎಂದು ಯೋಗ ನಡಿಗೆಗೆ ಶುಭ ಕೋರಿದರು. ಡಾ. ರಂಗಸ್ವಾಮಿ ಮಾತನಾಡಿ ಅವರು ಆರೋಗ್ಯವೇ ಭಾಗ್ಯ ಯೋಗದಿಂದ ಎಲ್ಲರಿಗೂ ಉಚಿತವಾಗಿ ಆರೋಗ್ಯ ಸಿಗಲಿದೆ. ನಿತ್ಯ ಯೋಗಭ್ಯಾಸ ಮಾಡಿ ನಿರೋಗಿಗಳಾಗಿ ಎಂದು ಕರೆ ನೀಡುವುದರ ಮುಖಾಂತರ ಜಾಥಕೆ ಶುಭ ಕೋರಿದರು. ನಂತರ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಆಯುಷ್ ಇಲಾಖೆ ವತಿಯಿಂದ ಯೋಗವನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ವೈದ್ಯ ಪದ್ಧತಿಗಳು ಚಿಕಿತ್ಸೆ ನೀಡಬಲ್ಲವೂ ಆದರೆ ಯೋಗದಿಂದ ಮಾತ್ರ ಆರೋಗ್ಯ ಪಡೆಯಲು ಸಾಧ್ಯ ಎಂದು ನಡಿಗೆಗೆ ಚಾಲನೆ ನೀಡಿದರು. ಡಾ. ಶಿವಕುಮಾರ್ ಟಿ ನಿರೂಪಿಸಿದರು. ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು, ಚಿತ್ರದುರ್ಗ ಜಿಲ್ಲೆ ವಿವಿಧ ಯೋಗಾಸಕ್ತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ನಂತರ ಯೋಗ ನಡಿಗೆಯು ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಶಿಸ್ತು ಬದ್ಧವಾಗಿ ಮುಂದುವರೆಯಿತು. ಯೋಗ ನಡಿಗೆಯು ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಕೊನೆಗೊಂಡು ಕೊನೆಗೊಂಡಿತು. ಆಯುಷ್ ಇಲಾಖೆ ವತಿಯಿಂದ ಭಾಗವಹಿಸಿದ್ದ ಎಲ್ಲರಿಗೂ ಆರೋಗ್ಯ ಕರ ಕಷಾಯದ ವಿತರಣೆ ಮಾಡಲಾಯಿತು.
