ಉದಯವಾಹಿನಿ, ತಾಳಿಕೋಟೆ: ತಾಲೂಕಿನ ಚೋಕ್ಕಾವಿ ಗ್ರಾಮದ ಪುರಾತನ ಭಾವಿಯಲ್ಲಿ ಬಿದ್ದಿದ್ದ ತ್ಯಾಜ ಮತ್ತು ಸುತ್ತಮುತ್ತಲಿನನ ಪ್ರದೇಶವನ್ನು ಗ್ರಾಮದ ಸಚೀನ್ ಗೆಳೆಯರ ಬಳಗದವರು ಸ್ವಚ್ಚಗೊಳಿಸುವದರೊಂದಿಗೆ ಗ್ರಾಮಸ್ಥರರ ಮೇಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಮಾರು ನೂರಾರು ವರ್ಷಗಳ ಹಳೆಯ ಪುರಾತನ ಭಾವಿಯು ಕಳೆದ 1 ವರ್ಷದಿಂದಲೂ ಸ್ವಚ್ಚತೆ ಕಂಡಿದ್ದಿಲ್ಲಾ ಗಾಳಿಗೆ ಭಾವಿಯಲ್ಲಿ ಹಾರಿ ಬಿದ್ದ ತ್ಯಾಜ್ಯದಿಂದ ನೀರು ಕಲುಷಿತಗೊಂಡಂತೆ ಕಾಣುತ್ತಿತ್ತು ಆದರೆ ಶ್ರೀ ಗ್ರಾಮದೇವತೆ ಜಾತ್ರೋತ್ಸವದ ಗಂಗಸ್ಥಳ ಅಲ್ಲದೇ ಸದ್ಯ ಮೋಹರಂ ಹಬ್ಬದ ದೇವರ ದಪನ್‍ದ ಕಾರ್ಯವೂ ಇದೇ ಭಾವಿಯಲ್ಲಿ ಪೂಜೆಯೊಂದಿಗೆ ನಡೆಯುತ್ತಿರುವದರಿಂದ ಗ್ರಾಮದ ಸಚೀನ್ ಗೆಳೆಯರ ಬಳಗದ ತಂಡವು ಭಾವಿ ಸ್ವಚ್ಚತೆಗೆ ಮುಂದಾಗುವದರೊಂದಿಗೆ ಭಾವಿಯ ಸುತ್ತಮುತ್ತಲಿನ ಪ್ರದೇಶವನ್ನೂ ಕೂಡಾ ಸ್ವಚ್ಚಗೊಳಿಸಿ ಮಾದರಿಯ ಕಾರ್ಯವನ್ನು ಮಾಡಿದ್ದಾರೆ. ಈ ಸ್ವಚ್ಚತಾ ಕಾರ್ಯದಲ್ಲಿ ಗೆಳೆಯರ ಬಳಗದ ಪ್ರವೀಣ್, ಆಕಾಶ, ನಾಗರಾಜ, ಸುರೇಶ, ಅಭಿ, ಪ್ರಶಾಂತ, ಸಚೀನ್, ಸುರೇಶ, ಅನೀಲ, ವಿರೇಶ, ಪ್ರಶಾಂತ, ದೇವಣ್ಣ ಮೊದಲಾದವರು ಪಾಲ್ಗೊಂಡಿದ್ದರು.
