ಉದಯವಾಹಿನಿ, ನವದೆಹಲಿ: ಟ್ರಿನಿಡಾಡ್ ಮತ್ತು ಟೊಬಾಗೋ ದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದು ಆನಂದಿಸಿದ್ದಾರೆ.ಸದ್ಯ ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ, ಘಾನಾ ಬಳಿಕ ಎರಡು ದಿನಗಳ ಕಾಲ ಟ್ರಿನಿಡಾಡ್ ಮತ್ತು ಟೊಬಾಗೋ ದೇಶಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರಿಗೆ ಅವರಿಗೆ `ಮಹಾಕುಂಭದ ಜಲ’ ಹಾಗೂ `ರಾಮಮಂದಿರದ ಪ್ರತಿಕೃತಿ’ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ರಾಮಮಂದಿರ ನಿರ್ಮಾಣ ಹಾಗೂ ದೇವಾಲಯದ ಮಹತ್ವವನ್ನು ಒತ್ತಿ ಹೇಳಿದರು.
ಬಳಿಕ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಮೋದಿ ಭಾಗಿಯಾಗಿ ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಊಟ ಸವಿದು ಆನಂದಿಸಿದರು. ಈ ಕುರಿತು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಂಸ್ಕೃತಿ ಮಹತ್ವವನ್ನು ಹೊಂದಿದ್ದು, ಭಾರತೀಯರಿಗೆ ಇಷ್ಟವಾಗುತ್ತದೆ. ಇಲ್ಲಿ ಯಾವುದೇ ಹಬ್ಬ, ವಿಶೇಷ ಕಾರ್ಯಕ್ರಮಗಳಲ್ಲಿ ಈ ಎಲ್ಲೆಯಲ್ಲಿ ಊಟ ಬಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
