ಉದಯವಾಹಿನಿ, ಕೊಡವ ಸಮುದಾಯ ಎಲ್ಲರನ್ನೂ ಬೆಂಬಲಿಸಿದೆ, ಈ ಕುರಿತು ನಮ್ಮ ಸಮುದಾಯದವರು ಮಾತನಾಡುತ್ತಾರೆ ಎಂದು ಹಿರಿಯ ನಟಿ ಪ್ರೇಮ ತಿಳಿಸಿದರು. ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಬಂದಿದ್ದು ನಾನೇ ಎಂಬ ನಟಿ ರಶ್ಮಿಕಾ ಮಂದಣ್ಣ ಹೇಳಿಕೆ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನಡೆದಿರುವ ವಿಷಯದ ಬಗ್ಗೆ ಜನರು ಕಾಮೆಂಟ್ಸ್ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ, ನಾನೇನು ಹೇಳಬೇಕಾಗಿಲ್ಲ. ಒಬ್ಬೊಬ್ಬರ ಭಾವನೆಗಳು ಒಂದೊಂದು ರೀತಿಯಾಗಿರುತ್ತೆ. ಅವರು ಈ ಸಮುದಾಯದ ವಿಷಯವನ್ನು ಯಾಕೆ ಮಾತನಾಡಿದ್ರೋ ನನಗೂ ಗೊತ್ತಾಗಿಲ್ಲ. ಆದರೆ ನಮ್ಮ ಸಮುದಾಯವನ್ನು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.
ಕನ್ನಡ ಚಿತ್ರರಂಗಕ್ಕೆ ಕೊಡವ ಸಮುದಾಯದಿಂದ ನನಗಿಂತ ಮುಂಚೆ ಚಾಮರಾಜಪೇಟೆ ಮೂಲದ ಶಶಿಕಲಾ ಎಂಬುವವರು ಬಂದಿದ್ದರು. ಅವರು ಪೋಷಕ ಪಾತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ಅದಾದ ಬಳಿಕ ನಾನು ನಟಿಯಾಗಿ ಬಂದೆ. ನಂತ್ರ ಕೊಡವ ಸಮುದಾಯದ ಹಲವಾರು ಜನರು ಚಿತ್ರರಂಗಕ್ಕೆ ಬಂದಿದ್ದಾರೆ ಎಂದು ಹೇಳಿದರು.
