ಉದಯವಾಹಿನಿ, ಇಸ್ಲಾಮಾಬಾದ್: ಆರ್ಥಿಕ ಕುಸಿತದಲ್ಲಿರುವ ಪಾಕಿಸ್ತಾನಕ್ಕೆ ಈ ಮೈಕ್ರೋಸಾಫ್ಟ್ ದೊಡ್ಡ ಶಾಕ್ ನೀಡಿದೆ. 25 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ಕಚೇರಿಯನ್ನು ಮುಚ್ಚಲು ಮೈಕ್ರೋಸಾಫ್ಟ್ ಮುಂದಾಗಿದೆ.2000ನೇ ಇಸ್ವಿಯಲ್ಲಿ ಮೈಕ್ರೋಸಾಫ್ಟ್ ಪಾಕಿಸ್ತಾನದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಮೈಕ್ರೋಸಾಫ್ಟ್ ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎನ್ನುವುದನ್ನು ಕಾರಣ ತಿಳಿಸದೇ ಇದ್ದರೂ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಬದಲಾಗುತ್ತಿರುವ ರಾಜಕೀಯ ಕಾರಣದಿಂದ ಈ ನಿರ್ಧಾರ ಕೈಗೊಂಡಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.ವಿಶ್ವಾದ್ಯಂತ ಸುಮಾರು 9,100 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೈಕ್ರೋಸಾಫ್ಟ್ ಪಾಕ್ ತೊರೆಯುವ ಸುದ್ದಿ ಪ್ರಕಟವಾಗಿದೆ.
ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್ ಹೂಡಿಕೆ ಮಾಡಲು ಮುಂದಾಗಿತ್ತು. ಆದರೆ ಇಮ್ರಾನ್ ಖಾನ್ ಪದಚ್ಯುತಗೊಳಿಸಿದ ನಂತರ ದೇಶದಲ್ಲಿನ ಅಸ್ಥಿರತೆಯಿಂದಾಗಿ ಮೈಕ್ರೋಸಾಫ್ಟ್ ತನ್ನ ವಿಸ್ತರಣೆಯನ್ನು ವಿಯೆಟ್ನಾಂಗೆ ಬದಲಾಯಿಸಿದೆ.
