ಉದಯವಾಹಿನಿ, ಪಾಟ್ನಾ: ವೈವಾಹಿಕ ಜೀವನದಲ್ಲಿ ವಂಚನೆ ಎಂಬುದು ಇತ್ತೀಚಿಗೆ ತುಂಬಾ ಸಾಮಾನ್ಯವಾಗಿ ಹೋಗಿದೆ. ಗಂಡಸರು, ಇನ್ನೊಬ್ಬ ಮಹಿಳೆಯರ ಜೊತೆ, ಮಹಿಳೆಯರು ಗಂಡನ ಬಿಟ್ಟು ಮತ್ತೊಬ್ಬ ಪರಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಮದುವೆಯೆಂಬ ಸಂಬಂಧದಲ್ಲಿ ಸಂಗಾತಿಗೆ ಹೆಚ್ಚು ಮೋಸ ಮಾಡುವವರು ಮಹಿಳೆಯರೇ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಪುರುಷರು ಎನ್ನುತ್ತಾರೆ.
ಅಕ್ರಮ ಸಂಬಂಧಗಳು ಸುಖವಾಗಿ ಸಂಸಾರ ನಡೆಸುತ್ತಿರುವವರ ಜೀವನಕ್ಕೆ ಕೊಳ್ಳಿ ಇಟ್ಟಂತೆ. ಇದು ಅನೇಕ ದಂಪತಿಗಳನ್ನು ದೂರ ಮಾಡಿದೆ. ಸಾಕಷ್ಟು ಸಂಸಾರಗಳನ್ನು ಒಡೆದು ಹಾಕಿದೆ. ಇಂತಹದ್ದೇ ಘಟನೆಯೊಂದು ಈಗ ಬಿಹಾರದಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಅಂತ ಆರೋಪಿಸಿ 24 ವರ್ಷದ ಯುವಕನನ್ನ ತನ್ನ ಚಿಕ್ಕಮ್ಮನೊಂದಿಗೆ ಮದ್ವೆ ಮಾಡಿಸಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ.
ವರದಿಯ ಪ್ರಕಾರ, ಇದೇ ಜುಲೈ 2ರಂದು ಮಿಥಲೇಶ್ ಕುಮಾರ್ ಮುಖಿಯಾ ಎಂಬ ಯುವಕನಿಗೆ ಜನರ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿ, ಜೀವ್‌ಚಾಪುರದಲ್ಲಿರುವ ಅವರ ಚಿಕ್ಕಪ್ಪ ಶಿವಚಂದ್ರ ಮುಖಿಯಾ ಮನೆಗೆ ಕರೆದೊಯ್ದಿದೆ. ಅಲ್ಲಿ ಅವನ ಚಿಕ್ಕಮ್ಮನ ಜೊತೆಗೆ ಮದುವೆ ಮಾಡಿಸಿದೆ. ಈ ಕುರಿತು ಯುವಕನ ತಂದೆ ರಾಮಚಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
