ಉದಯವಾಹಿನಿ, ಚಿತ್ರದುರ್ಗ: ಸುಡುಗಾಡಿಗೆ ಹೋಗಿ ತೆಂಗಿನಕಾಯಿ ಒಡೆದರೂ GST ಅನ್ವಯಿಸುತ್ತೆ ಎಂದು ಕಾರ್ಮಿಕ ಇಲಾಖೆ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.ಚಿತ್ರದುರ್ಗದಲ್ಲಿ ಗ್ರಾಹಕರು ಸಣ್ಣ ವ್ಯಾಪಾರ ವಹಿವಾಟಿಗೆ ಬಳಸಿದ ಗೂಗಲ್ ಪೇ ಹಾಗೂ ಫೋನ್ ಪೇ ಆಧರಿಸಿ, ಜಿಎಸ್‌ಟಿ ಕಟ್ಟುವಂತಿರುವ ನಿಯಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ಹಾಲು, ಮೊಸರು, ಅರಶಿಣ ಸೇರಿದಂತೆ ಎಲ್ಲದರ ಮೇಲೂ ಜಿಎಸ್‌ಟಿ ಇದೆ. ಶೇ. 60% ನಿಂದ 70% ಜನರು ಜಿಎಸ್‌ಟಿ ಭರಿಸಬೇಕಾಗಿದೆ. ಈ ಜಿಎಸ್‌ಟಿಯಿಂದ ದೇಶದಲ್ಲಿ ಸಾಹುಕಾರರಿಗೆ ಅನುಕೂಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ದೇ ಸುಮಾರು ಹದಿನಾರುವರೆ ಲಕ್ಷ ಕೋಟಿ ರೂ. ಮಾಫಿ ಆಗಿದೆ. ಇದರಿಂದ ರೈತರು, ಬಡವರು ಹಾಗು ಮಧ್ಯಮ ವರ್ಗಕ್ಕೆ ಯಾವ್ದೇ ಅನುಕೂಲವಾಗಿಲ್ಲ. ಈ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಹಾಗೆಯೇ ಯಾವ ಕ್ಯಾಶ್ ಲೆಸ್ ಕೌಂಟರ್ ಫೇಕ್ ನೋಟ್ಸ್ ಪತ್ತೆ ಆಗ್ತಿದ್ದು, ಸುಮಾರು 26,000 ಕೋಟಿಯಷ್ಟು 2 ಸಾವಿರರ ನೋಟನ್ನು ಆರ್‌ಬಿಐ ಪತ್ತೆ ಹಚ್ಚಿದೆ. 1 ಲಕ್ಷ 14 ಸಾವಿರ ಕೋಟಿಯಷ್ಟು 500 ರೂ. ಮುಖಬೆಲೆಯ ನೋಟು ಫೇಕ್ ಕರೆನ್ಸಿ ಸಿಗ್ತಿದೆ. ಆದರೆ ಕೇಂದ್ರ ಸರ್ಕಾರ ಜನಕ್ಕೆ ಸುಳ್ಳು ಹೇಳಿ ಪಿಕ್ಚರ್ ನಡೆಸಿಕೊಂಡು ಹೋಗಿದ್ದಾರೆಂದು ಕೇಂದ್ರ ಸರ್ಕಾರದ ವಿರುದ್ಧ ಸಂತೋಷ್ ಲಾಡ್ ಗುಡುಗಿದ್ದಾರೆ.
