ಉದಯವಾಹಿನಿ, ಬೆಂಗಳೂರು: ಮಹಿಳೆಯರಿಗೆ ಫ್ರೀ ಬಸ್ ನೀಡಿದ್ದ ಸರ್ಕಾರ ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ ಗುಡ್ ನ್ಯೂಸ್ ನೀಡಿದ್ದು, ಈ ಮೂಲಕ ರಾಜ್ಯ ಸಾರಿಗೆ 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಿದೆ. ಶಕ್ತಿ ಯೋಜನೆ ಸರ್ಕಾರದ ಮಹತ್ವದ ಗ್ಯಾರಂಟಿಯು ಸರ್ಕಾರಕ್ಕೆ ಅತಿ ಹೆಚ್ಚು ಹೆಸರು ತಂದ ಯೋಜನೆ ಕೂಡ. ಮಹಿಳೆಯರಿಗೆ ಯೋಜನೆ ಫ್ರೀ ಮಾಡಿದ್ದ ಸರ್ಕಾರ, ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ ಮಹತ್ವದ ಆದೇಶ ಹೊರಡಿಸಿದ್ದು, ಈ ಮೂಲಕ ಅಂಧರು ರಾಜ್ಯವ್ಯಾಪಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿದೆ.
ಹೌದು, ಈ ಹಿಂದೆ 4 ನಿಗಮಗಳ ಪೈಕಿ ಯಾವ ನಿಗಮದ ಬಸ್‌ಪಾಸ್ ಇತ್ತೋ ಆ ಬಸ್‌ನಲ್ಲಿ ಮಾತ್ರ ಅಂಧತ್ವ ಇದ್ದವರು ಓಡಾಡಲು ಅವಕಾಶ ಇತ್ತು. ಇದು ಅನೇಕರಿಗೆ ಸಮಸ್ಯೆ ಕೂಡ ಆಗುತ್ತಿತ್ತು. ಅದರಲ್ಲೂ ಬೆಂಗಳೂರಿನಲ್ಲಿರೋ ಹಲವರು ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಅವಕಾಶ ಇದ್ದವರು ಕೆಎಸ್‌ಆರ್‌ಟಿಸಿಯಲ್ಲಿ ಓಡಾಡಬೇಕಾದ್ರೆ ಹಣ ಪಾವತಿ ಮಾಡಿಯೇ ಓಡಾಡಬೇಕಿತ್ತು.
ಆದರೆ ಈಗ ಅಂಧರ ಅನೂಕೂಲಕ್ಕಾಗಿ ಸರ್ಕಾರ ಹೊಸ ಆದೇಶ ಮಾಡಿದೆ. ಆ ಪ್ರಕಾರ ಯಾವುದಾದರೂ 1 ನಿಗಮದ ಪಾಸ್ ಇದ್ದರೆ, 4 ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಸದ್ಯ ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ ಸೂಚಿಸಿದ್ದು, ಶೀಘ್ರ ಈ ಕ್ರಮಕ್ಕೆ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!