ಉದಯವಾಹಿನಿ, ಚಿಕ್ಕೋಡಿ: ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಬಾಲಕನೊಬ್ಬ ಕುದುರೆ ಏರಿ ನಿತ್ಯ ಶಾಲೆಗೆ ತೆರಳುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ಸೊಲ್ಹಾಪುರ ನಡೆದಿದೆ. ಮಹಾರಾಷ್ಟ್ರದ ಸೊಲ್ಹಾಪುರ ಜಿಲ್ಲೆ ಬಾರ್ಶಿ ತಾಲೂಕಿನ ವ್ಯರಾಗ್ ಪಟ್ಟಣದ ಹೊರವಲಯದ ಗ್ರಾಮೀಣ ಭಾಗದ 9 ವರ್ಷದ ಆದರ್ಶ ಸಾಳುಂಕ ಎಂಬ ಬಾಲಕ ಸರಿಯಾದ ಸಮಯಕ್ಕೆ ಬಾರದ ಬಸ್‌ಗೆ ಗೋಲಿ ಮಾರೋ ಎಂದು ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದಾನೆ. ಬಾಲಕನ ಅಜ್ಜನ ಬಳಿ ಇರುವ 7 ಕುದುರೆಗಳ ಪೈಕಿ 1 ಕುದುರೆಯನ್ನು ಓಡಿಸಿಕೊಂಡು ಹೋಗಿ ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದಾನೆ.
